ಡಿಕೆ ಶಿವಕುಮಾರ್ ಇನ್ನೂ ಆರೇ ತಿಂಗಳಲ್ಲಿ ಸಿಎಂ ಆಗುವ ಪರಿಸ್ಥಿತಿ ಇದೆ: ಸುಧಾಕರ್ ಭವಿಷ್ಯ

Public TV
1 Min Read
k sudhakar

ಚಿಕ್ಕಬಳ್ಳಾಪುರ: ಇನ್ನೂ 6 ತಿಂಗಳಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಮುಖ್ಯಮಂತ್ರಿ ಆಗುವ ಪರಿಸ್ಥಿತಿ ಇದೆ ಎಂದು ಸಂಸದ ಡಾ.ಕೆ ಸುಧಾಕರ್‌ (Dr K Sudhakar) ಭವಿಷ್ಯ ನುಡಿದಿದ್ದಾರೆ.

ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ‌ (Chikkaballapura) ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.

DK Shivakumar 2 1

ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅನ್ನುವವರು ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲವಾ…? 35 ಮಂದಿ ನ್ಯೂ ಇಯರ್ ಪಾರ್ಟಿ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಅದ್ರಲ್ಲೂ ಡಿಸಿಎಂ ಫಾರಿನ್ ಟೂರಲ್ಲಿ ಇರಬೇಕಾದ್ರೆ ಮಾಡಿದ್ರಲ್ಲ, ಇದು ಗುಂಪುಗಾರಿಕೆ ಅಲ್ಲವಾ..? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ʻನನ್ನ ಹೆಂಡತಿಗೆ ಪಾಠ ಕಲಿಸಿʼ – ಪತ್ನಿಯ ಕಿರುಕುಳದ ಬಗ್ಗೆ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ 6 ತಿಂಗಳಲ್ಲಿ ಸಿಎಂ ಆಗುವ ಪರಿಸ್ಥಿತಿ ಇದೆ. ಹಾಗಾಗಿ ಸಿಎಂ ಡಿನ್ನರ್ ಮೀಟಿಂಗ್ ಮಾಡಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜಮ್ಮುವಿನ ಬಂಡಿಪೋರಾದಲ್ಲಿ ಪ್ರಪಾತಕ್ಕೆ ಬಿದ್ದ ಸೇನಾ ವಾಹನ – ನಾಲ್ವರು ಯೋಧರು ಹುತಾತ್ಮ!

Share This Article