ಬಾಗಲಕೋಟೆ: ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆ (Illegal Slaughter House) ಮೇಲೆ ಕೆರೂರು ಪೊಲೀಸರು (Kerur Police) ದಾಳಿ ನಡೆಸಿ 12 ಗೋವುಗಳನ್ನು ರಕ್ಷಿಸಿದ್ದಾರೆ.
ಬಾದಾಮಿ (Badami) ತಾಲೂಕಿನ ಕೆರೂರು ಪಟ್ಟಣದ ಹಜರತ್ ನಿಬಿಸಾಬ್ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ. ಸಾರ್ವಜನಿಕರು ಎಷ್ಟೇ ಹೇಳಿದರೂ ಅಕ್ರಮ ಕಸಾಯಿಖಾನೆ ನಡೆಸುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: 25 ವರ್ಷದ ಬಳಿಕ ವಿದ್ಯಾರ್ಥಿಗಳ ಸಮಾಗಮ – ತರಗತಿಯಲ್ಲಿ ಗುರುಗಳ ಪಾಠ!
ಇಂದು ಖಚಿತ ಮಾಹಿತಿ ಮೇರೆಗೆ ಕೆರೂರು ಪಿಎಸ್‌ಐ ನೇತೃತ್ವದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿದ ಪೊಲೀಸರು ಅಲ್ಲಿರುವ ಗೋವುಗಳನ್ನು ರಕ್ಷಿಸಿದ್ದಾರೆ.
ಗೋವುಗಳನ್ನ ಕೆರೂರು ಸಂತೆಯಲ್ಲಿ ಖರೀದಿಸುತ್ತಿದ್ದ ಹಜರತ್ ನಬಿಸಾಬ್ ನಂತರ ಅವುಗಳನ್ನು ಕತ್ತರಿಸಿ ಮಾಂಸಗಳನ್ನು ಬೇರೆಡೆಗೆ ಸಾಗಾಟ ಮಾಡುತ್ತಿದ್ದ. ಪೊಲೀಸರು ದಾಳಿ ನಡೆಸಿದ ವೇಳೆ ಕಸಾಯಿಖಾನೆಯಲ್ಲಿ 7 ಹಸು, 4 ಕರು ಸೇರಿದಂತೆ 12 ಹಸುಗಳು ಇರುವುದು ಬೆಳಕಿಗೆ ಬಂದಿದೆ.
ಹಸುಗಳನ್ನು ರಕ್ಷಣೆ ಮಾಡಿ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹಜರತ್ ನಿಬಿಸಾಬ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.