ಶಿಮ್ಲಾ: ಮದ್ಯ ಹಾಗೂ ಆಹಾರವನ್ನು ನಿರಾಕರಿಸಿದ್ದಕ್ಕೆ ಪೊಲೀಸ್ ಪೇದೆಗಳು ರೆಸಾರ್ಟ್ ಮ್ಯಾನೇಜರ್‌ನನ್ನು ಹತ್ಯೆಗೈದ ಘಟನೆ ಹಿಮಾಚಲ ಪ್ರದೇಶದ (Himachal Pradesh) ರೆಸಾರ್ಟ್‌ನಲ್ಲಿ ನಡೆದಿದೆ.
ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅನೂಪ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:BBK 11: ನನ್ನ ಮಗಳು ಕಳಪೆಯಲ್ಲ: ಚೈತ್ರಾ ಪರ ನಿಂತ ತಾಯಿ
ಹಿಮಾಚಲ ಪ್ರದೇಶದ ಡಾಲ್‌ಹೌಸಿ ಬಳಿಯ ಬನಿಖೇತ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ತಡರಾತ್ರಿ ಮೂವರು ಕಾನ್‌ಸ್ಟೇಬಲ್‌ಗಳು ರೆಸಾರ್ಟ್‌ಗೆ ತೆರಳಿ ಆಹಾರ ಹಾಗೂ ಮದ್ಯವನ್ನು ಕೇಳಿದ್ದಾರೆ. ತಡವಾಗಿರುವ ಕಾರಣ ಯಾರು ಸಿಬ್ಬಂದಿಗಳಿಲ್ಲ ಎಂದು ಸ್ವಾಗತಕಾರಿಣಿ ಹೇಳಿ ಆಹಾರ ಮತ್ತು ಮದ್ಯ ನೀಡಲು ನಿರಾಕರಿಸಿದ್ದರು. ಇದರಿಂದಾಗಿ ಸ್ವಾಗತಕಾರಿಣಿ ಹಾಗೂ ಪೇದೆಗಳ ಮಧ್ಯೆ ಗಲಾಟೆ ಶುರುವಾಗಿದೆ.
ಗಲಾಟೆ ಕೇಳಿ ಸ್ಥಳಕ್ಕೆ ರೆಸಾರ್ಟ್‌ನ ಜನರಲ್ ಮ್ಯಾನೇಜರ್ ರಾಜಿಂದರ್ ಆಗಮಿಸಿದ್ದಾರೆ. ಈ ವೇಳೆ ಪೇದೆಗಳು ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ನೆಲಕ್ಕೆ ಕುಸಿದ ಮ್ಯಾನೇಜರ್ ಸಾವನ್ನಪ್ಪಿದರು. ಬಳಿಕ ಪೊಲೀಸರು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಬಂಧಿಸಲಾಗಿದ್ದು, ಕೊಲೆ ಆರೋಪದಡಿ ದೂರು ದಾಖಲಿಸಲಾಗಿದೆ.
ಸ್ಥಳೀಯ ಅಧಿಕಾರಿಗಳು ಈ ಕುರಿತು ಮಾತನಾಡಿ, ಘಟನೆ ವೇಳೆ ಕಾನ್‌ಸ್ಟೇಬಲ್‌ಗಳು ಕುಡಿದ ಮತ್ತಿನಲ್ಲಿದ್ದಿರಬಹುದು ಎಂದು ಶಂಕಿಸಿದ್ದಾರೆ. ಸದ್ಯ ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಪಬ್ಲಿಕ್ ಟಿವಿಯ ರವೀಶ್ ಹೆಚ್‌ಎಸ್‌ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ