‘ಮುಂಗಾರು ಮಳೆ 2′ (Mungarumale 2) ಚಿತ್ರದ ‘ಸರಿಯಾಗಿ ನೆನಪಿದೆ ನನಗೆ’ ಖ್ಯಾತಿಯ ಗಾಯಕ ಅರ್ಮಾನ್ ಮಲಿಕ್ (Armaan Malik) ಇಂದು (ಜ.2) ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ಗಾಯಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬಸ್ಥರ ಸಮ್ಮುಖದಲ್ಲಿ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ (Aashna Shroff) ಜೊತೆ ಅರ್ಮಾನ್ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಗುಟ್ಟಾಗಿ ಮದುವೆಯಾಗುವ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಆಶ್ನಾ ಜೊತೆಗಿನ ಫೋಟೋ ಶೇರ್ ಮಾಡಿ ‘ನೀನೇ ನನ್ನ ಮನೆ’ ಎಂದು ಗಾಯಕ ಅಡಿಬರಹ ನೀಡಿದ್ದಾರೆ.
View this post on Instagram
ಆಶ್ನಾ ಕೇಸರಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಅರ್ಮಾನ್ ಲೈಟ್ ಬಣ್ಣ ಶೆರ್ವಾನಿಯಲ್ಲಿ ಧರಿಸಿದ್ದಾರೆ. ಖುಷಿ ಖುಷಿಯಾಗಿ ಹೊಸ ಬಾಳಿಗೆ ಕಾಲಿಟ್ಟಿರುವ ಅರ್ಮಾನ್ ದಂಪತಿಯ ಫೋಟೋ ನೋಡಿ ಫ್ಯಾನ್ಸ್, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಅಂದಹಾಗೆ, ಕಳೆದ ವರ್ಷ ಆಶ್ನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಸಿಂಗರ್ ರಿವೀಲ್ ಮಾಡಿದರು.
ಇನ್ನೂ ಬಹುಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ಗಾಯಕ ಅರ್ಮಾನ್ ಕನ್ನಡದಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಡಿದ್ದಾರೆ.