ರಿಮ್ಸ್ ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು – ಬಾಣಂತಿಯರ ಸಾವಿನ ಸಂಖ್ಯೆ 11ಕ್ಕೆ ಏರಿಕೆ

Public TV
1 Min Read
Raichuru Maternal Death

ರಾಯಚೂರು: ಹೊಸ ವರ್ಷದ ಮೊದಲ ದಿನವೇ ಬಾಣಂತಿ ಹಾಗೂ ಶಿಶು ಸಾವನ್ನಪ್ಪಿರುವ ಘಟನೆ ರಾಯಚೂರಿನ (Raichuru) ರಿಮ್ಸ್ (RIMS) ಆಸ್ಪತ್ರೆಯಲ್ಲಿ ನಡೆದಿದೆ.

ಮೃತ ಬಾಣಂತಿಯನ್ನು ದೇವದುರ್ಗ (Devadurga) ತಾಲೂಕಿನ ಮಸೀದಪೂರ ಗ್ರಾಮದ ಶಿವಲಿಂಗಮ್ಮ (22) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬಂಡೀಪುರದಲ್ಲಿ ಐದು ಹುಲಿಗಳ ದರ್ಶನ – ನ್ಯೂ ಇಯರ್ ಹೊತ್ತಲ್ಲಿ ಪ್ರವಾಸಿಗರು ಫುಲ್ ಖುಷ್

ಮಗು ಸಾವನ್ನಪ್ಪಿದ ಎರಡು ಗಂಟೆಗಳ ಬಳಿಕ ತಾಯಿ ಸಾವನ್ನಪ್ಪಿದ್ದಾಳೆ. ಬಾಣಂತಿ ಹಾಗೂ ಮಗುವಿನ ಸಾವಿನಿಂದ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ 11ನೇ ಬಾಣಂತಿ ಸಾವು ಇದಾಗಿದೆ. ಬಾಣಂತಿ ಸಾವಿಗೆ ಅಧಿಕ ರಕ್ತದೊತ್ತಡ ಹಾಗೂ ಆರೋಗ್ಯದಲ್ಲಾದ ಏರುಪೇರು ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಡಿ.27 ರಂದು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಯಾಗಿತ್ತು. ಇಂದು (ಜ.01) ಫಲಕಾರಿಯಾಗದೇ ತಾಯಿ ಹಾಗೂ ಮಗು ಇಬ್ಬರು ಸಾವನ್ನಪ್ಪಿದ್ದಾರೆ. ಸಿಸೇರಿಯನ್ ಹೆರಿಗೆ ಬಳಿಕ ರಕ್ತಸ್ರಾವ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಬಾಣಂತಿ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾಳೆ. ಜೊತೆಗೆ ಹುಟ್ಟಿದಾಗಿನಿಂದಲೂ ಇನ್ಫೆಕ್ಷನ್‌ಗೆ ಒಳಗಾಗಿದ್ದ ಶಿಶು ಕೂಡ ಕೊನೆಯುಸಿರೆಳೆದಿದೆ.ಇದನ್ನೂ ಓದಿ: ಹೊಸ ವರ್ಷದ ಆರಂಭದ ತಿಂಗಳಲ್ಲೇ ಬಸ್ ಟಿಕೆಟ್ ದರ ಏರಿಕೆಯಾಗುತ್ತಾ?

Share This Article