ಹೊಸ ವರ್ಷದಂದು ಪಬ್‌ಗೆ ಹೋಗಿದ್ದ ಯುವತಿಗೆ ಬ್ಯಾಡ್ ಟಚ್ ಆರೋಪ – ಎಫ್‌ಐಆರ್‌ ದಾಖಲು

Pub

ಬೆಂಗಳೂರು: ಹೊಸ ವರ್ಷ (New Year 2025) ಸಂಭ್ರಮಾಚರಣೆಗಾಗಿ ಪಬ್‌ಗೆ ತೆರಳಿದ್ದ ಯುವತಿಗೆ ಅಪರಿಚಿತ ಯುವಕನೊಬ್ಬ ಬ್ಯಾಡ್‌ ಟಚ್‌ ಮಾಡಿರುವ ಆರೋಪ ಕೇಳಿಬಂದಿದೆ.

ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್‌ನಲ್ಲಿ (kadubeesanahalli Social Pub) ಘಟನೆ ನಡೆದಿದೆ. ಯುವತಿ ನೀಡಿದ ದೂರಿನ ಮೇರೆಗೆ ಅಪರಿಚಿತ ಯುವಕನ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ (Marathahalli Police Station) ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: 2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ

New Year 03

ಏನಿದು ಘಟನೆ?
ಹೊಸ ವರ್ಷ ಸಂಭ್ರಮಾಚರಣೆಗಾಗಿ ಮಂಗಳವಾರ ತಡರಾತ್ರಿ ಯುವತಿ ತನ್ನ ಸ್ನೇಹಿತನೊಂದಿಗೆ ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್‌ಗೆ ಬಂದಿದ್ದಳು. ಈ ವೇಳೆ ಅಪರಿಚಿತ ಯುವಕ ಬ್ಯಾಡ್‌ ಟಚ್‌ ಮಾಡಿದ್ದಾನೆ. ಈ ವೇಳೆ ಯುವತಿ ಪಬ್‌ನಲ್ಲೇ ಕಿರುಚಾಡಿದ್ದಾಳೆ, ಸರಿಯಾದ ಭದ್ರತೆ ಒದಗಿಸಿಲ್ಲ ಅಂತ ಪಬ್‌ ಸಿಬ್ಬಂದಿ ಮೇಲೂ ಕೂಗಾಡಿ ರಂಪಾಟ ಮಾಡಿದ್ದಾಳೆ. ಅಷ್ಟರಲ್ಲಿ ಯುವಕ ಸ್ಥಳದಿಂದ ಎಸ್ಕೇಪ್‌ ಆಗಿದ್ದ ಎಂದು ತಿಳಿದುಬಂದಿದೆ.

ಬಳಿಕ ಮಾರತ್ತಹಳ್ಳಿ ಠಾಣೆಗೆ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಪಬ್ ಡಿವಿಆರ್ ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌