ಹೊಸ ವರ್ಷ ಸಂಭ್ರಮ; ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ – ಟ್ರಾಫಿಕ್‌ ಜಾಮ್

Public TV
1 Min Read
nandi hills

ಚಿಕ್ಕಬಳ್ಳಾಪುರ: ಹೊಸ ವರ್ಷ 2025ಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ನ್ಯೂ ಇಯರ್ ಸಂಭ್ರಮಾಚರಣೆಗಾಗಿ ನಂದಿಗಿರಿಧಾಮಕ್ಕೆ (Nandi Hills) ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟಕ್ಕೆ ದಂಡು ದಂಡಾಗಿ ಪ್ರವಾಸಿಗರು ಆಗಮಿಸಿದರು. ಪರಿಣಾಮ ನಂದಿ ಬೆಟ್ಟದ ಕ್ರಾಸ್‌ನಲ್ಲೇ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಇದನ್ನೂ ಓದಿ: ಬದಲಾವಣೆಗೇಕೆ ಹೊಸ ವರ್ಷ?

nandi hills traffic

ಕಾರು ಹಾಗೂ ಬೈಕ್‌ಗಳಲ್ಲಿ ನಂದಿ ಬೆಟ್ಟಕ್ಕೆ ಪ್ರವಾಸಿಗರು ಲಗ್ಗೆ ಇಟ್ಟರು. ಬೆಳಗ್ಗೆ 7 ಗಂಟೆಗೆ ಚೆಕ್‌ಪೋಸ್ಟ್ ತೆರೆದಿದ್ದೇ ತಡ ನಾ ಮುಂದು ತಾ ಮುಂದು ಅಂತ ಆಗಮಿಸಿದರು.

ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನಲ್ಲಿ ಮಧ್ಯರಾತ್ರಿ 12 ಗಂಟೆಗೆ ಗ್ರ್ಯಾಂಡ್‌ ವೆಲ್‌ಕಮ್ ಕೋರಲಾಯಿತು. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್‌, ವೈಟ್‌ಫೀಲ್ಡ್ ಮೊದಲಾದ ಪ್ರಮುಖ ಭಾಗಗಳಲ್ಲಿ ಕಿಕ್ಕಿರಿದು ಯುವಜನತೆ ಸೇರಿದ್ದರು. ಇದನ್ನೂ ಓದಿ: ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

ಅನೇಕರು ಮದ್ಯದ ಅಮಲಿನಲ್ಲಿ ಒಂದಷ್ಟು ಕಿರಿಕ್ ಮಾಡಿಕೊಂಡರು. ನಶೆಯಲ್ಲಿ ರಸ್ತೆಗೆ ಬಿದ್ದ ಯುವತಿಯನ್ನು ಸ್ನೇಹಿತ ಎತ್ತಿಕೊಂಡು ಹೋದ ಘಟನೆ ಕೂಡ ಸಿಲಿಕಾನ್ ಸಿಟಿಯಲ್ಲಿ ನಡೆಯಿತು. ಇನ್ನೂ ಅಮಲಿನಲ್ಲಿ ಕೂಗಾಡುತ್ತಿದ್ದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

Share This Article