ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್‌ಗಳ ಭರ್ಜರಿ ಗೆಲುವು

Public TV
1 Min Read
Australia Test Cricket 1

ಮೆಲ್ಬರ್ನ್‌: ಬಾಕ್ಸಿಂಗ್‌ ಡೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತದ (Team India) ವಿರುದ್ಧ ಆಸ್ಟ್ರೇಲಿಯಾ (Australia) 184 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

4ನೇ ಟೆಸ್ಟ್‌ಗೆಲ್ಲಲು 340 ರನ್‌ಗಳ ಗುರಿಯನ್ನು ಪಡೆದ ಭಾರತ 79.1 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್‌ ಆಯ್ತು. 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ.

Australia Test Cricket

ನಾಲ್ಕನೇ ದಿನ 9 ವಿಕೆಟ್‌ ನಷ್ಟಕ್ಕೆ 228 ರನ್‌ಗಳಿದ್ದ ಆಸ್ಟ್ರೇಲಿಯಾ ಇಂದು ಆ ಮೊತ್ತಕ್ಕೆ 8 ರನ್‌ ಗಳಿಸಿ ಆಲೌಟ್‌ ಆಯ್ತು. ನಂತರ ಬ್ಯಾಟಿಂಗ್‌ ಮಾಡಿದ ಭಾರತ 25 ರನ್‌ಗಳಿಸುವಷ್ಟರಲ್ಲಿ ನಾಯಕ ರೋಹಿತ್‌ ಶರ್ಮಾ ಅವರ ವಿಕೆಟ್‌ ಕಳೆದುಕೊಂಡಿತ್ತು.

ರೋಹಿತ್‌ ಔಟಾದ ಬೆನ್ನಲ್ಲೇ ಕೆಎಲ್‌ ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಔಟಾದರು. ನಂತರ ಯಶಸ್ವಿ ಜೈಸ್ವಾಲ್‌ ಮತ್ತು ರಿಷಭ್‌ ಪಂತ್‌ ಇನ್ನಿಂಗ್ಸ್‌ ಕಟ್ಟತೊಡಗಿದರು. ತಂಡದ ಮೊತ್ತ 121 ಆದಾಗ ರಿಷಭ್‌ ಪಂತ್‌ ಔಟಾದರೋ ತಂಡ ಹಠಾತ್‌ ಕುಸಿತ ಕಾಣತೊಡಗಿತು. 34 ರನ್‌ ಅಂತರದಲ್ಲಿ ಕೊನೆಯ 7 ವಿಕೆಟ್‌ ಪತಗೊಂಡಿದ್ದರಿಂದ ಭಾರತ ಹೀನಾಯವಾಗಿ ಸೋತಿದೆ.

Australia Test Cricket 2

ಭಾರತದ ಯಶಸ್ವಿ ಜೈಸ್ವಾಲ್‌ 84 ರನ್‌, ರಿಷಭ್‌ ಪಂತ್‌ 30 ರನ್‌ ಹೊಡೆದರೆ ಇತರೇ ರೂಪದಲ್ಲಿ 12 ರನ್‌( ಬೈ 5, ಲೆಗ್‌ ಬೈ 5, ನೋಬಾಲ್‌ 2) ಬಂದಿತ್ತು. 8 ಆಟಗಾರರು ಎರಡಂಕಿ ದಾಟಲು ವಿಫಲರಾದರು.

ನಾಯಕ ಪ್ಯಾಟ್‌ ಕಮ್ಮಿನ್ಸ್‌ ಮತ್ತು ಸ್ಕಾಟ್‌ ಬೊಲಾಂಡ್‌ ತಲಾ ಮೂರು ವಿಕೆಟ್‌ ಪಡೆದರೆ ನಥನ್‌ ಲಿಯಾನ್‌ 2, ಮಿಶೆಲ್‌ ಸ್ಟ್ರಾಕ್‌ ಮತ್ತು ಟ್ರಾವಿಸ್‌ ಹೆಡ್‌ ತಲಾ ಒಂದೊಂದು ವಿಕೆಟ್‌ ಪಡೆದರು.

 

Share This Article