ಆನ್‌ಲೈನ್ ಗೇಮ್ ಹುಚ್ಚಾಟದಿಂದ ಲಕ್ಷ ಲಕ್ಷ ಸಾಲ – ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

Public TV
1 Min Read
Online Game bidar

ಬೀದರ್: ಆನ್‌ಲೈನ್ ಗೇಮ್ ಹುಚ್ಚಾಟದಿಂದ ಲಕ್ಷಾಂತರ ರೂ. ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಜ್ಯೋತಿ ತಾಂಡದಲ್ಲಿ ನಡೆದಿದೆ.

ಮೃತ ಯುವಕನನ್ನು 25 ವರ್ಷದ ವಿಜಯ್‌ಕುಮಾರ್ ಜಗನ್ನಾಥ ಹೊಳ್ಳೆ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಫಲಿಸಿತು ಅಪ್ಪನ ತ್ಯಾಗ – ಮಗನಿಗಾಗಿ ಸರ್ಕಾರಿ ಉದ್ಯೋಗ ತೊರೆದಿದ್ದ ನಿತೀಶ್‌ ರೆಡ್ಡಿ ತಂದೆ!

ಎರಡು ದಿನಗಳ ಹಿಂದೆ ಮೈಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಎರಡೂ ದಿನಗಳ ಕಾಲ ನರಳಾಡಿ ಇಂದು (ಡಿ.28) ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ಮೃತ ಯುವಕ ಬಿ.ಫಾರ್ಮಸಿ ಪದವೀಧರನಾಗಿದ್ದು, ಆನ್ಲೈನ್ ಗೇಮ್ ಹುಚ್ಚಿಗೆ ಬಿದ್ದು 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ. ಇದಕ್ಕೂ ಮುನ್ನ 10 ಲಕ್ಷ ರೂ. ಸಾಲ ಮಾಡಿದ್ದ, ಅದನ್ನು ಆತನ ಕುಟುಂಬಸ್ಥರು ತೀರಿಸಿದ್ದರು. ಅದಾದ ಬಳಿಕ ಮತ್ತೆ 5 ಲಕ್ಷ ರೂ. ಸಾಲ ಮಾಡಿದ್ದನು. ಈ ವಿಷಯ ಮನೆಯಲ್ಲಿ ಗೊತ್ತಾದರೆ ತೊಂದರೆ ಆಗುತ್ತದೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದನು. ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ 6 ಮಂದಿ ವಿರುದ್ಧ ಎಫ್‍ಐಆರ್

Share This Article