ಛತ್ತೀಸ್‌ಗಢ: ಸರಕು ಸಾಗಣೆ ವಾಹನ ಪಲ್ಟಿಯಾಗಿ 5 ಮಂದಿ ಸಾವು

Public TV
1 Min Read
Chhattisgarh Accident

ರಾಯ್ಪುರ: ಛತ್ತೀಸ್‌ಗಢದ (Chhattisgarh) ಬಸ್ತಾರ್ ಜಿಲ್ಲೆಯಲ್ಲಿ ಶನಿವಾರ ಮಿನಿ ಗೂಡ್ಸ್ ವಾಹನ ಪಲ್ಟಿಯಾಗಿ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಮಹೇಶ್ವರ್ ನಾಗ್ ಪ್ರಕಾರ, ಜಗದಲ್‌ಪುರದ ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಮೇಟಾ ಗ್ರಾಮದ ಬಳಿ ಸುಮಾರು 45 ಜನರನ್ನು ಕರೆದೊಯ್ಯುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿದೆ. ಇದನ್ನೂ ಓದಿ: Maharashtra | ನೂತನ ಸಚಿವರಿಗೆ ಖಾತೆ ಹಂಚಿಕೆ, ಗೃಹಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌!

ದುರ್ಘಟನೆಯ ಬಗ್ಗೆ ಮಾಹಿತಿ ತಿಳಿದ ಸಿಆರ್‌ಪಿಎಫ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯಾಧಿಕಾರಿ ದಿಲೀಪ್ ಕಶ್ಯಪ್, ‘ಸಂಜೆ 4:30 ರ ಸುಮಾರಿಗೆ ನಮಗೆ ಅಪಘಾತದ ಮಾಹಿತಿ ಸಿಕ್ಕಿತು. ಇದುವರೆಗೆ ಸುಮಾರು 30 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 4 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 81 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Punjab | ಮೊಹಾಲಿಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಮಹಿಳೆ ಸಾವು – ಸಿಎಂ ಭಗವಂತ್‌ ಮಾನ್‌ ಕಂಬನಿ

Share This Article