ದರ್ಶನ್‌ಗೆ ಜಾಮೀನು – ಶೀಘ್ರವೇ ಸುಪ್ರೀಂನಲ್ಲಿ ಮೇಲ್ಮನವಿ

Public TV
1 Min Read
bengaluru police commissioner b dayanand
ಬೆಂಗಳೂರು ನಗರ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ದರ್ಶನ್‌ಗೆ (Darshan) ಮತ್ತು ಇತರ ಆರೋಪಿಗಳಿಗೆ ಹೈಕೋರ್ಟ್‌ ನೀಡಿದ ಜಾಮೀನು ಆದೇಶವನ್ನು ಸುಪ್ರೀಂನಲ್ಲಿ (Supreme Court) ಪ್ರಶ್ನಿಸಲು ಬೆಂಗಳೂರು ಪೊಲೀಸರು ಈಗ ಸಿದ್ಧತೆ ನಡೆಸುತ್ತಿದ್ದಾರೆ.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡುತ್ತೇವೆ. ಕೋರ್ಟ್ ಗೆ ಹೋಗಲು ತಯಾರಿ ನಡೆದಿದ್ದು ಶೀಘ್ರವೇ ಅರ್ಜಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ (B Dayananda)  ಹೇಳಿದ್ದಾರೆ.

ಗೃಹ ಸಚಿವಾಲಯ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಪೊಲೀಸರು ಚಾರ್ಜ್‌ಶೀಟ್‌ ಪ್ರತಿಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದರು. ಈ ಎಲ್ಲಾ ಪ್ರಕ್ರಿಯೆಗಳು ಈಗ ಮಗಿದಿದೆ.

ಡಿ.13 ರಂದು ಹೈಕೋರ್ಟ್‌ ದರ್ಶನ್‌ಗೆ ಜಾಮೀನು ಮಂಜೂರು ಮಾಡಿತ್ತು. ಇದಕ್ಕೂ ಮೊದಲು ದರ್ಶನ್‌ ವೈದ್ಯಕೀಯ ಕಾರಣ ನೀಡಿ 6 ವಾರಗಳ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು.

Share This Article