ಹಿಜಬ್‌ ಧರಿಸದೇ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಕ್ಕೆ ಇರಾನ್‌ ಗಾಯಕಿ ಬಂಧನ

Public TV
1 Min Read
iran singer Parastoo Ahmady

ಟೆಹ್ರಾನ್: ಹಿಜಬ್ (Hijab) ಧರಿಸದೆ ಯೂಟ್ಯೂಬ್‌ನಲ್ಲಿ ವರ್ಚುವಲ್ ಕನ್ಸರ್ಟ್‌ನಲ್ಲಿ ಪ್ರದರ್ಶನ ನೀಡಿದ್ದಕ್ಕೆ ಇರಾನಿನ ಗಾಯಕಿಯನ್ನು (Iran Singer) ಬಂಧಿಸಲಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇರಾನ್‌ನ ರಾಜಧಾನಿ ಟೆಹ್ರಾನ್‌ನಿಂದ ಸುಮಾರು 280 ಕಿಮೀ ದೂರದಲ್ಲಿರುವ ಮಜಂದರಾನ್ ಪ್ರಾಂತ್ಯದ ಸಾರಿ ನಗರದಲ್ಲಿ ಶನಿವಾರ ಗಾಯಕಿ ಪರಸ್ಟೂ ಅಹ್ಮದಿಯನ್ನು (27) ಬಂಧಿಸಲಾಗಿದೆ ಎಂದು ಆಕೆಯ ವಕೀಲ ಮಿಲಾದ್ ಪನಾಹಿಪೂರ್ ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್‌ ರೆಸಾರ್ಟ್‌ನಲ್ಲಿ ಆಪಲ್‌ ಸಿಇಒ ಟಿಮ್‌ ಕುಕ್‌, ಡಿನ್ನರ್‌ನಲ್ಲಿ ಭಾಗಿ

Hijab

ನಾಲ್ವರು ಪುರುಷ ಸಂಗೀತಗಾರರ ಜೊತೆಗೆ ತೋಳಿಲ್ಲದ ಕಪ್ಪು ಡ್ರೆಸ್‌ ಧರಿಸಿ, ಕೂದಲನ್ನು ಬಿಚ್ಚಿಟ್ಟು ಪ್ರದರ್ಶನ ನೀಡುತ್ತಿದ್ದ ಆಕೆ ತನ್ನ ಸಂಗೀತ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಲಾಗಿದೆ.

ನಾನು ಪರಸ್ಟೂ, ನಾನು ಪ್ರೀತಿಸುವ ಜನರಿಗಾಗಿ ಹಾಡಲು ಬಯಸುವ ಹುಡುಗಿ. ಇದು ನಾನು ನಿರ್ಲಕ್ಷಿಸಲು ಸಾಧ್ಯವಾಗದ ಹಕ್ಕು. ನಾನು ಉತ್ಸಾಹದಿಂದ ಪ್ರೀತಿಸುವ ಭೂಮಿಗಾಗಿ ಹಾಡುತ್ತೇನೆ. ನಮ್ಮ ಪ್ರೀತಿಯ ಇರಾನ್‌ನ ಈ ಭಾಗದಲ್ಲಿ, ಇತಿಹಾಸ ಮತ್ತು ನಮ್ಮ ಪುರಾಣಗಳು ಹೆಣೆದುಕೊಂಡಿವೆ. ಈ ಕಾಲ್ಪನಿಕ ಸಂಗೀತ ಕಚೇರಿಯಲ್ಲಿ ನನ್ನ ಧ್ವನಿಯನ್ನು ಕೇಳಿ ಮತ್ತು ಈ ಸುಂದರ ತಾಯ್ನಾಡನ್ನು ಕಲ್ಪಿಸಿಕೊಳ್ಳಿ ಎಂದು ಮಿಸ್ ಅಹ್ಮದಿ ಯೂಟ್ಯೂಬ್‌ನಲ್ಲಿ ವೀಡಿಯೊದೊಂದಿಗೆ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಪೂರ್ವ ತಯಾರಿ – ಒಂದೇ ದಿನ 101 ಪುರುಷರೊಂದಿಗೆ ಲಿಲಿ ಸೆಕ್ಸ್‌

ವೀಡಿಯೊ ಹಂಚಿಕೆ ವೇದಿಕೆಯಲ್ಲಿ ಸಂಗೀತ ಕಚೇರಿಯು 15 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಇಬ್ಬರು ಪುರುಷ ಸಂಗೀತಗಾರರಾದ ಸೊಹೇಲ್ ಫಾಘಿಹ್ ನಾಸಿರಿ ಮತ್ತು ಎಹ್ಸಾನ್ ಬೈರಾಗ್ದರ್ ಅವರನ್ನು ಅದೇ ದಿನ ಟೆಹ್ರಾನ್‌ನಲ್ಲಿ ಬಂಧಿಸಲಾಗಿದೆ.

Share This Article