ಜನನಿಬಿಡ ಪ್ರದೇಶದಲ್ಲಿ ತಲ್ವಾರ್ ಝಳಪಿಸಿದ ಯುವಕ ಅರೆಸ್ಟ್

Public TV
1 Min Read
talwar attack chamarajanagara

ಚಾಮರಾಜನಗರ: ಜನನಿಬಿಡ ಪ್ರದೇಶದಲ್ಲಿ ತಲ್ವಾರ್ ಝಳಪಿಸಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆಗೆ ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ತಲ್ವಾರ್ ಹಿಡಿದು ನಿಂತಿದ್ದ ದೀಪು ಎಂಬ ಯುವಕನನ್ನು ಬಂಧಿಸಲಾಗಿದೆ. ಹಣಕಾಸು ವಿಚಾರಕ್ಕೆ ಗಲಾಟೆ ನಡೆದಿದ್ದು, ಕೃಷ್ಣಮೂರ್ತಿ ಎಂಬವರ ಮೇಲೆ ಯುವಕ ಹಲ್ಲೆಗೆ ಯತ್ನಿಸಿದ್ದ. ಇದನ್ನೂ ಓದಿ: ಹೊಳೆಹೊನ್ನೂರಲ್ಲಿ ಪ್ರತ್ಯೇಕ ಅಪಘಾತ – ಇಬ್ಬರು ಯುವಕರ ದುರ್ಮರಣ

ಚಾಮರಾಜನಗರದ ದೊಡ್ಡಂಗಡಿ ಬೀದಿಯಲ್ಲಿ ಘಟನೆ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ತಲ್ವಾರ್ ಝಳಪಿಸಿತ್ತಾ ದೀಪು ಹಲ್ಲೆಗೆ ಮುಂದಾಗಿದ್ದ. ತಲ್ವಾರ್ ತಗುಲಿ ಕೃಷ್ಣಮೂರ್ತಿ ಕೈ ಬೆರಳಿಗೆ ಗಾಯವಾಗಿದೆ. ಹಲ್ಲೆಗೆ ಯತ್ನಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪರಿಸ್ಥಿತಿ ತಿಳಿಗೊಳಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ತಲ್ವಾರ್ ಹಿಡಿದು ನಿಂತಿದ್ದ ಯುವಕನನ್ನು ಬಂಧಿಸಿದ್ದಾರೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಟ ದರ್ಶನ್‌ಗೆ ಬಿಗ್‌ ರಿಲೀಫ್‌; 7 ತಿಂಗಳ ಬಳಿಕ ಜಾಮೀನು ಮಂಜೂರು

Share This Article