ದರ್ಶನ್‌ ಜಾಮೀನು ಭವಿಷ್ಯ ಇಂದು – ಜೈಲೋ ಬೇಲೋ?

Public TV
1 Min Read
Darshan 4 1

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪಿಗಳ ಜಾಮೀನು ಭವಿಷ್ಯ ಇಂದು ಪ್ರಕಟ ಆಗಲಿದೆ. ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಜನ ಆರೋಪಿಗಳ ಜಾಮೀನು ಭವಿಷ್ಯ ಇಂದು (ಡಿ.13) ತೀರ್ಮಾನ ಆಗಲಿದೆ.

ಈಗಾಗಲೇ 7 ಜನ ಆರೋಪಿಗಳ ಪರ ವಿರುದ್ಧ ವಾದ – ಪ್ರತಿವಾದ ಆಲಿಸಿರೋ ನ್ಯಾ. ವಿಶ್ವಜಿತ್ ಶೆಟ್ಟಿ ಪೀಠದಿಂದ ಮಧ್ಯಾಹ್ನ 2:30ರ ವೇಳೆಗೆ ತೀರ್ಪು ಹೊರಬೀಳಲಿದೆ. ಇದನ್ನೂ ಓದಿ: ಮಧ್ಯಂತರ ಜಾಮೀನು ಅವಧಿ ಅಂತ್ಯದ ದಿನವೇ ದರ್ಶನ್‌ಗೆ ಸರ್ಜರಿ – ಸದ್ಯಕ್ಕೆ ʻದಾಸʼನಿಗೆ ರಿಲೀಫ್‌!

darshan release from jail

7 ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ಇದೇ ಡಿ.9ರಂದು ಪೂರ್ಣಗೊಳಿಸಿತ್ತು. ಬಳಿಕ ಮುಂದಿನ ಆದೇಶದ ವರೆಗೆ ಮಧ್ಯಂತರ ಜಾಮೀನು ವಿಸ್ತರಣೆ ಮಾಡಿತ್ತು. ಇದನ್ನೂ ಓದಿ: ಹಿಂದೂ ಪದ ವಿವಾದ – ಸಚಿವ ಸತೀಶ್ ಜಾರಕಿಹೊಳಿಗೆ ಬಿಗ್ ರಿಲೀಫ್

ಒಂದೊಮ್ಮೆ ದರ್ಶನ್‌ ಜಾಮೀನು ಅರ್ಜಿ ವಜಾಗೊಂಡರೆ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ, ಗುಣಮುಖರಾದ ಬಳಿಕ ಮತ್ತೆ ಜೈಲಿಗೆ ತೆರಳಬೇಕಾಗುತ್ತದೆ. ಬೇಲ್‌ ಸಿಕ್ಕರೆ ಗುಣಮುಖರಾದ ನಂತರ ಮನೆಗೆ ತೆರಳಲಿದ್ದಾರೆ. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ಕೇಸ್ – ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆ

Share This Article