ಮಡಿಕೇರಿ: ಹಿಂದುತ್ವದ ಭಾವದಿಂದ ಒಂದಾಗಿ ಹನುಮ ಜಯಂತಿಯನ್ನು ಮಾಡಿದರೆ, ಮಾತ್ರ ಭವಿಷ್ಯದಲ್ಲಿ ಭಾರತ ಉಳಿಯುತ್ತದೆ ಎಂಬ ಎಚ್ಚರಿಕೆ ನೀಡಲು ಬಂದಿದ್ದೇನೆ ಎಂದು ವಕ್ಪ್ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಅಬ್ಬರಿಸಿದ್ದಾರೆ.
ಕೊಡಗಿನ ಕುಶಾಲನಗರದಲ್ಲಿ ಹನುಮನ ಜಯಂತಿ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಯಜ್ಞಯಾಗಾದಿ ಮಾಡುವಾಗ ಅದನ್ನ ಭಂಗಗೊಳಿಸಲು ರಾಕ್ಷಸರು ಬರುತ್ತಿದ್ದರಂತೆ. ಭಸ್ಮಸುರ, ಬಕಾಸುರ ಹೀಗೆ ಹಲವಾರು ರಾಕ್ಷಸರು ಇದ್ದರು. ಆ ರೀತಿಯ ಕೋಟೆ ನಾಡಿನ ರಾಕ್ಷಸರು ಈಗ ಇಲ್ಲ. ಅದರೆ, ರಾಕ್ಷಸಿ ಮಾನಸಿಕತೆ ಇರುವ ಜನರು ಇದ್ದಾರೆ. ನಮ್ಮ ದೇವಾಲಯವನ್ನ ಕಂಡರೆ ಅಗದೇ ಇರುವವರು ಇದ್ದಾರೆ. ಭಯೋತ್ಪಾದನೆ ಮೂಲಕ ನರ ಸಂಹಾರ ಮಾಡುವ ಮೂಲಕ ರಕ್ತಪಿಶಾಚಿಗಳು ಇದ್ದಾರೆ. ಜಿಹಾದಿ ಮಾನಸಿಕತೆಯ ಮೂಲಕ ಭಾರತವನ್ನ ಧ್ವಂಸ ಮಾಡುವ ರಾಕ್ಷಸಿ ಮನಸ್ಥಿತಿ ಇರುವಂತಹ ಜನ ಇದ್ದಾರೆ. ಇದೆಲ್ಲದಕ್ಕೂ ಉತ್ತರ ಒಬ್ಬ ವ್ಯಕ್ತಿ ಕೊಟ್ಟರೆ ಸಾಕಾಗುವುದಿಲ್ಲ. ಕೇವಲ ಅಧಿಕಾರದ ಮೂಲಕ ಇದು ಸಾಧ್ಯವಾಗುವುದಿಲ್ಲ. ಇದಕ್ಕೆ ಉತ್ತರವನ್ನ ಸಮಾಜ ಕೊಡಬೇಕು. ಸಮಾಜ ಒಂದೊಂದು ಪ್ರಶ್ನೆಯನ್ನೂ ತಾನೇ ಹಾಕಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಹಿಂದುತ್ವದ ಭಾವವನ್ನು ಗಟ್ಟಿಗೊಳಿಸಬೇಕು. ಹನುಮ ಜಯಂತಿ ಅಸ್ಪೃಶ್ಯತೆಯನ್ನ ದೂರ ಮಾಡಬೇಕು. ಹನುಮ ಜಯಂತಿ ರಾಮ ಭಕ್ತಿಯ ಮೂಲಕ ರಾಷ್ಟ್ರಕ್ಕೆ ಒಂದು ಶಕ್ತಿಯಾಗಿ ಹಿಂದೂ ಸಮಾಜವನ್ನ ಕಟ್ಟಿಕೊಡಬೇಕು. ಹಾಗಾದರೆ ಮಾತ್ರ ಹನುಮ ಜಯಂತಿ ಮಾಡುವುದರಲ್ಲಿ ಅರ್ಥ ಇದೆ. ನಮ್ಮ ಮನ ಮತ್ತು ಮನೆಯಿಂದ ಅಸ್ಪೃಶ್ಯತೆ ದೂರ ಆಗಲಿ. ಜಾತೀಯತೆ ದೂರ ಆಗಲಿ. ನಾವೆಲ್ಲ ಒಂದು, ನಾವೆಲ್ಲ ಹಿಂದೂ ಭಾವದಿಂದ ಒಂದಾಗಿ ನಿಲ್ಲೋಣ. ಒಂದಾಗಿ ನಿಂತಾಗ ರಾಕ್ಷಸಿ ಶಕ್ತಿ ತಾನಾಗಿಯೇ ಅಡಗಿ ಹೋಗುತ್ತದೆ. ನಮ್ಮಿಂದ ಮೋಸದಿಂದ ವಂಚನೆಯಿಂದ ಆಕ್ರಮಿಸಿ ಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಮಗೆ ಇನ್ನೊಬ್ಬರದು ಬೇಡ. ಅದ್ರೆ ನಮ್ಮಿಂದ ಮೋಸದಿಂದ ಅಕ್ರಮಿಸಿಕೊಂಡಿದ್ದಾರೋ ಅದನ್ನ ಬೀಡಬೇಕಾ? ಶ್ರೀರಂಗಪಟ್ಟಣದ ಮೂಡಲಬಾಗಿಲು ಆಂಜನೇಯ ಸ್ವಾಮಿ ದೇವಾಲಯದ ಅಸ್ತಿ ಮುಕ್ತ ಆಗಬೇಕು. ಬರೀ ಅಯೋಧ್ಯೆಯ ರಾಮಮಂದಿರ ಜಾಗ ಮುಕ್ತ ಅದ್ರೆ ಸಾಲದು. ಶ್ರೀರಂಗಪಟ್ಟಣದ ಮೂಡಲಬಾಗಿಲು ಆಂಜನೇಯ ಸ್ವಾಮಿಯ ದೇವಾಲಯ ಜಾಗವು ಮುಕ್ತವಾಗಬೇಕು ಎಂಬ ಸಂಕಲ್ಪದೊಂದಿಗೆ ಹನುಮ ಜಯಂತಿಯನ್ನ ಆಚರಣೆ ಮಾಡಬೇಕು ಎಂದು ತಿಳಿಸಿದ್ದಾರೆ.

