Raichur| ಬೀದಿನಾಯಿಗಳ ದಾಳಿಯಿಂದ ಕೋಮಾಗೆ ಹೋಗಿದ್ದ ಯುವತಿ ಸಾವು

Public TV
1 Min Read
Raichur Stray Dogs Attack copy

ರಾಯಚೂರು: ನಗರದ ಮಡ್ಡಿಪೇಟೆಯಲ್ಲಿ (Maddipete) ಬೀದಿ ನಾಯಿಗಳ (Stary Dogs) ದಾಳಿಯಿಂದ ತಲೆಗೆ ತೀವ್ರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

20 ವರ್ಷದ ಮಹಾದೇವಿ ಮೃತ ದುರ್ದೈವಿ ಯುವತಿ. ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ. ಮಂಗಳವಾರ ಬೆಳಗ್ಗೆ ದೇವಾಲಯಕ್ಕೆ ಹೊರಟಿದ್ದ ಯುವತಿ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿತ್ತು. ನಾಯಿಗಳ ದಾಳಿಗೆ ಹೆದರಿದ ಯುವತಿ ಕೆಳಗೆ ಬಿದ್ದಿದ್ದು ತಲೆಗೆ ಬಲವಾದ ಪೆಟ್ಟಾಗಿತ್ತು. ಕೆಳಗೆ ಬಿದ್ದ ಯುವತಿಯನ್ನು ನಾಯಿಗಳು ಎಳೆದಾಡಿವೆ. ತಲೆಗೆ ಪೆಟ್ಟು ಬಿದ್ದಿದ್ದರಿಂದ ರಕ್ತ ಹೆಪ್ಪುಗಟ್ಟಿ ಯುವತಿ ಕೋಮಾ ಸ್ಥಿತಿಗೆ ಹೋಗಿದ್ದಳು. ಇದನ್ನೂ ಓದಿ: ಬೀದಿನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ತಲೆಗೆ ಪೆಟ್ಟು – ಕೋಮಾಗೆ ತಲುಪಿದ ಯುವತಿ

ಯುವತಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಾವನ್ನಪ್ಪಿದ್ದಾಳೆ. ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯುವತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಇದನ್ನೂ ಓದಿ: ಹುಟ್ಟೂರಲ್ಲಿ ಎಸ್‌.ಎಂ.ಕೃಷ್ಣ ಅಂತ್ಯಕ್ರಿಯೆ; ಸಿಎಂ ಸೇರಿ ಅನೇಕ ಗಣ್ಯರಿಂದ ಅಂತಿಮ ನಮನ

Share This Article