ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ ಎಸ್ಎಂಕೆ – ರಾಧಿಕಾ ಪಂಡಿತ್ ಭಾವುಕ ಪೋಸ್ಟ್

Public TV
1 Min Read
radhika pandit 1

ಮಾಜಿ ಸಿಎಂ‌ ಎಸ್.ಎಂ ಕೃಷ್ಣ ನಿಧನಕ್ಕೆ ನಟಿ ರಾಧಿಕಾ ಪಂಡಿತ್ (Radhika Pandit) ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ ಎಸ್.ಎಂ ಕೃಷ್ಣ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.

WhatsApp Image 2024 12 10 at 20.27.15

ಎಸ್.ಎಂ ಕೃಷ್ಣ (SM Krishna) ನಿಧನಕ್ಕೆ ರಾಜಕೀಯ, ಸಿನಿಮಾರಂಗದ ಮಂದಿ ಸಂತಾಪ ಸೂಚಿಸಿದ್ದಾರೆ. ಇದೀಗ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ, ಹಸನ್ಮುಖಿ, ಕಲಾಪ್ರೇಮಿಯಾಗಿ ಸದಾ ಕಾಲ ನಮ್ಮ ಕುಟುಂಬವನ್ನು ಪ್ರೋತ್ಸಾಹಿಸಿದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣರವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಓಂ ಶಾಂತಿ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

2016ರಲ್ಲಿ ಯಶ್ ಮತ್ತು ರಾಧಿಕಾ ಮದುವೆಗೆ ಎಸ್.ಎಂ ಕೃಷ್ಣ ಬಂದು ಹಾರೈಸಿದ ಫೋಟೋ ಶೇರ್ ಮಾಡಿ ನಟಿ ಕಂಬನಿ ಮಿಡಿದಿದ್ದಾರೆ.

Share This Article