‘ಬಿಗ್ ಬಾಸ್ ಕನ್ನಡ 11’ರ ಕಾರ್ಯಕ್ರಮಕ್ಕೆ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಮತ್ತು ನಮ್ರತಾ ಗೌಡ (Namratha Gowda) ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಧನರಾಜ್ ಅವರು ರಜತ್‌ರನ್ನು ನಾಮಿನೇಟ್ ಮಾಡಿದ್ದಕ್ಕೆ ಸಿಟ್ಟಾಗಿದ್ದಾರೆ. ಇಬ್ಬರೂ ಮಾತಿನ ಚಕಮಕಿ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಮನೆಗೆ ಆಗಮಿಸಿ ನಾಮಿನೇಷನ್ ಪಾಸ್ ಟಾಸ್ಕ್ ಮಾಡಿಸಿದರು. ಇದೀಗ ಇಂದಿನ ಸಂಚಿಕೆಯಲ್ಲಿ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಆಗಮಿಸಿದ್ದಾರೆ. ಈ ವೇಳೆ ನಾಮಿನೇಷನ್ ಪ್ರಕ್ರಿಯೆ ಜರುಗಿದ್ದು, ಧನರಾಜ್ ಈ ಹಿಂದಿನ ಟಾಸ್ಕ್ ಕಾರಣ ಕೊಟ್ಟು ನಾಮಿನೇಟ್ ಮಾಡಿರೋದು ಕೋಪ ತರಿಸಿದೆ. ಇದನ್ನೂ ಓದಿ:ಅಣ್ಣಾವ್ರ ಅಪಹರಣದ ಸಂದರ್ಭ ಹೇಗಿತ್ತು?: ಎಸ್‌ಎಂ ಕೃಷ್ಣ ಸಹಾಯ ನೆನೆದ ಶಿವಣ್ಣ
ನನ್ನ ಹತ್ರ ಹೀಗೆಲ್ಲಾ ಆಟ ಆಡಬೇಡ. ನಿನಗೆ ಮಗು ಅಂತ ಹೇಳೋದು ಇದೇ ಕಾರಣಕ್ಕೆ ಎಂದು ಧನರಾಜ್‌ಗೆ ರಜತ್ ಟೀಕಿಸಿದ್ದಾರೆ. ಏ ಪಾಪು ಎನ್ನುತ್ತಾರೆ. ಅದಕ್ಕೆ ಅಂಕಲ್ ಅಂಕಲ್ ಎನ್ನುತ್ತಾ ಧನರಾಜ್ ತಿರುಗೇಟು ನೀಡಿದ್ದಾರೆ. ಮೈ ಮುಟ್ಟಿ ರಜತ್‌ನ್ನು ಮಾತನಾಡಿಸುತ್ತಾರೆ. ಈ ವೇಳೆ, ಇಬ್ಬರ ವಾಕ್ಸಮರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ಜಗಳ ತಪ್ಪಿಸಲು ಉಗ್ರಂ ಮಂಜು ಮಧ್ಯೆಕ್ಕೆ ಹೋಗಿದ್ದಾರೆ. ಆ ನಂತರ ಎನ್ ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
View this post on Instagram
ಮನೆಗೆ ಗೆಸ್ಟ್ ಆಗಿ ಬಂದಿರುವ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಯಾವ ಟಾಸ್ಕ್ ಮಾಡಿಸುತ್ತಾರೆ. ಎನೆಲ್ಲಾ ತಿರುವು ಸಿಗಲಿದೆ ಎಂಬುದು ಕಾದುನೋಡಬೇಕಿದೆ.