ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳನ್ನು ನೀಡೋದ್ರರಲ್ಲಿ ಮಲಯಾಳಂ ಸಿನಿಮಾರಂಗ ಯಾವಾಗಲೂ ಮುಂದು. ಹೀಗಿರುವಾಗ ಆವೇಶಂ, ಪುಷ್ಪ 2 (Pushpa 2) ಸಿನಿಮಾಗಳ ಮೂಲಕ ಸಕ್ಸಸ್ ಕಂಡಿರುವ ಪ್ರತಿಭಾನ್ವಿತ ನಟ ಫಹಾದ್ ಫಾಸಿಲ್ (Fahadh Faasil) ಇದೀಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಬಾಲಿವುಡ್‌ನಿಂದ ನಟನಿಗೆ ಬಂಪರ್ ಆಫರ್ ಸಿಕ್ಕಿದೆ.
ಇಮ್ತಿಯಾಜ್ ಅಲಿ ನಿರ್ದೇಶನದ ಸಿನಿಮಾದಲ್ಲಿ ಫಹಾದ್ ಫಾಸಿಲ್ ಹೀರೋ ಆಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗೆ `ಅನಿಮಲ್’ ಚಿತ್ರದ ‘ಬಾಬಿ 2’ ತೃಪ್ತಿ ದಿಮ್ರಿ ಹೀರೋಯಿನ್ ಆಗಿ ನಟಿಸಲಿದ್ದಾರೆ. ಇದನ್ನೂ ಓದಿ:ಡಿಗ್ನಿಫೈಡ್ ರಾಜಕಾರಣಿ, ಬೆಂಗಳೂರು ನಂ.1 ಆಗಲು ಎಸ್‌ಎಂಕೆ ಕಾರಣ: ಸುಮಲತಾ
ಫಹಾದ್ ಮತ್ತು ತೃಪ್ತಿ ದಿಮ್ರಿ ಜೋಡಿಯನ್ನು ಹೈಲೆಟ್ ಮಾಡಿಕೊಂಡು ವಿಭಿನ್ನ ಕಥಾಹಂದರ ತೋರಿಸಲು ಹೊರಟಿದ್ದಾರೆ. ಸದ್ಯ ಫಹಾದ್ ಅವರು ಬಾಲಿವುಡ್‌ನಲ್ಲಿ ನಟಿಸಲಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.