`ಮಹಾ’ ಸ್ಪೀಕರ್ ಹುದ್ದೆಗೆ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ನಾಮಪತ್ರ ಸಲ್ಲಿಕೆ

Public TV
1 Min Read
Rahul Narvekar

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ (Maharashtra Speaker) ಹುದ್ದೆಗೆ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ (Rahul Narvekar) ಭಾನುವಾರ ನಾಮಪತ್ರ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಮತ್ತು ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನಕುಳೆ, ಚಂದ್ರಕಾಂತ ಪಾಟೀಲ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

Devendra Fadnavis

ಈ ಹುದ್ದೆಗೆ ಯಾವುದೇ ಅಭ್ಯರ್ಥಿಯ ಹೆಸರನ್ನು ಮಹಾವಿಕಾಸ್ ಅಘಾಡಿ (MVA) ಇನ್ನೂ ಪ್ರಕಟಿಸಿಲ್ಲ. ಡಿಸೆಂಬರ್ 9 ರಂದು ಮಧ್ಯಾಹ್ನ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದಕ್ಕೆ ತಯಾರಿ ಶುರುವಾಗಿದೆ. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಕುಮಾರಸ್ವಾಮಿ, ಅಶೋಕ್‌ ಕನಸು – 5 ವರ್ಷ ನಮ್ಮದೇ ಸರ್ಕಾರ ಎಂದ ಸಿದ್ದರಾಮಯ್ಯ

Rahul Narvekar 2

ಈ ನಡುವೆ ಮಹಾ ವಿಕಾಸ್ ಅಖಾಡಿ ನಾಯಕರು ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಮೂರು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ ದಿನ (ಶನಿವಾರ) ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಿದ್ದರು. ಇದನ್ನೂ ಓದಿ: 2 ಸಾವಿರ ಬೇಡ 10 ಸಾವಿರ ಕೊಡಿ – ಹೊಸ ಬಟ್ಟೆ ಅಂಗಡಿ ಮುಂದೆ ಮಂಗಳಮುಖಿಯರ ಕಿರಿಕ್‌

ಕಾಂಗ್ರೆಸ್ ನಾಯಕರಾದ ನಾನಾ ಪಟೋಲೆ, ವಿಜಯ್ ವಾಡೆತ್ತಿವಾರ್ ಮತ್ತು ಅಮಿತ್ ದೇಶಮುಖ್, ಎನ್‌ಸಿಪಿ-ಎಸ್‌ಪಿಯ ಅಮಿತ್ ದೇಶಮುಖ್ ಮತ್ತು ಶಿವಸೇನೆಯ (ಯುಬಿಟಿ) ಆದಿತ್ಯ ಠಾಕ್ರೆ ಸೇರಿದಂತೆ ಕೆಲವು ಶಾಸಕರು ಇಂದು ಸದನದ ಕಲಾಪ ಪ್ರಾರಂಭವಾದ ಕೂಡಲೇ ಪ್ರಮಾಣ ವಚನ ಸ್ವೀಕರಿಸಿದ್ದರು. ಇದನ್ನೂ ಓದಿ: ದಿಲ್ಜಿತ್ ದೋಸಾಂಜ್ ಸಂಗೀತ ಕಚೇರಿಯಲ್ಲಿ ಮದ್ಯ ಮತ್ತು ಮಾಂಸದೂಟ: ಬಜರಂಗದಳ ಪ್ರತಿಭಟನೆ 

Share This Article