ಪ್ರಧಾನಿ ಅಂಗಳ ತಲುಪಿದ ಮುಡಾ ಪ್ರಕರಣ – ಸಿಬಿಐಗೆ ವಹಿಸುವಂತೆ ವಕೀಲನಿಂದ ಪತ್ರ

Public TV
1 Min Read
pm modi ayushman bharat

ಮೈಸೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಮುಡಾ ಹಗರಣ (Muda Scam Case) ಈಗ ಪ್ರಧಾನಿ ಅಂಗಳ ತಲುಪಿದೆ. ಮುಡಾ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಕೀಲರೊಬ್ಬರು ಪ್ರಧಾನಿ ಮೋದಿಯವರಿಗೆ (Narendra Modi) ಪತ್ರ ಬರೆದಿದ್ದಾರೆ.

ವಕೀಲ ರವಿಕುಮಾರ್ ಎಂಬವರು ಈ ವರ್ಷ ಜು.19ರಂದು ಪ್ರಧಾನ ಮಂತ್ರಿಗಳಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. 296 ಪುಟಗಳ ದಾಖಲೆ ಸಮೇತ ಪತ್ರ ರವಾನಿಸಲಾಗಿದೆ. ಈಗಾಗಲೇ ಪ್ರಧಾನಿಗಳ ಕಚೇರಿಗೆ ಪತ್ರ ತಲುಪಿದೆ.

ಮುಡಾ ಮಾಜಿ ಆಯುಕ್ತರಾದ ದಿನೇಶ್ ಮತ್ತು ಡಿ.ಬಿ.ನಟೇಶ್ ಇಬ್ಬರೇ ಸರ್ಕಾರಕ್ಕೆ 100 ಕೋಟಿ ರೂ.ಗೂ ಅಧಿಕ ಆರ್ಥಿಕ ನಷ್ಟ ಮಾಡಿದ್ದಾರೆ. ಅಲ್ಲದೇ ಸೇಲ್ ಡೀಡ್ ಮತ್ತು  ಸೆಟ್ಲ್‌ಮೆಂಟ್ ಡೀಡ್ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಪತ್ರದಲ್ಲಿ ದಾಖಲಿಸಲಾಗಿದೆ.

ದಿನೇಶ್ ಕುಮಾರ್ ಮತ್ತು ನಟೇಶ್ ಬೇನಾಮಿ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Share This Article