ತಲೆಗೆ ಗುಂಡು ಹಾರಿಸಿಕೊಂಡು 17ರ ಬಾಲಕ ಆತ್ಮಹತ್ಯೆ

Public TV
1 Min Read
Crime-Scene

ಭೋಪಾಲ್: ತಲೆಗೆ ಗುಂಡು ಹಾರಿಸಿಕೊಂಡು 17 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶ (Madhya Pradesh) ಭೋಪಾಲ್‌ನಲ್ಲಿರುವ (Bhopal) ಸರ್ಕಾರಿ ಶೂಟಿಂಗ್ ಅಕಾಡೆಮಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಮಧ್ಯಪ್ರದೇಶದ ಅಶೋಕ್ ನಗರ ನಿವಾಸಿಯಾಗಿರುವ 17 ವರ್ಷದ ಯಥಾರ್ಥ್ ರಘುವಂಶಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – 26.60 ಲಕ್ಷ ಸಂಗ್ರಹ

ರಾತಿಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ರಾಸ್ ಬಿಹಾರಿ ಶರ್ಮಾ ಮಾಹಿತಿ ಪ್ರಕಾರ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಅಕಾಡೆಮಿಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಭಾನುವಾರ (ನ.30) ಸಂಜೆ ಅಕಾಡೆಮಿಯಲ್ಲಿ ಪ್ರಾಯೋಗಿಕ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಹೀಗಾಗಿ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಜಾನಪದ ವಿವಿ ಘಟಿಕೋತ್ಸವಕ್ಕೆ ಆಹ್ವಾನಿಸದ್ದಕ್ಕೆ ಶಿಗ್ಗಾಂವಿಯ ನೂತನ ಕೈ ಶಾಸಕ, ಬೆಂಬಲಿಗರಿಂದ ದರ್ಪ

Share This Article