ಸ್ಟಾರ್ ನಟ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಪುತ್ರಿಗೆ ಇಂದು (ಡಿ.2) 6ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮಗಳು ಐರಾಳ ಕ್ಯೂಟ್ ವಿಡಿಯೋ ಶೇರ್ ಮಾಡಿ ಸ್ಪೆಷಲ್ ಆಗಿ ಯಶ್ ಜೋಡಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಗೋಧ್ರಾ ದುರಂತ ಆಧರಿತ ಸಿನಿಮಾ ‘ದಿ ಸಾಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ ಮೋದಿ
ಚಿಕ್ಕ ಕಾಲ್ಬೆರಳುಗಳಿಂದ ಹಿಡಿದು ಚಿನ್ನದ ಹೃದಯದವರೆಗೆ, ಇದು ಶುದ್ಧ ಪ್ರೀತಿ, ಮತ್ತು ಸಂತೋಷ ಮತ್ತು ಕಿಡಿಗೇಡಿತನದ 6 ವರ್ಷಗಳು. ನಮ್ಮ ಐರಾಗೆ ಜನ್ಮ ದಿನದ ಶುಭಾಶಯಗಳು ಎಂದು ಯಶ್ ಮತ್ತು ರಾಧಿಕಾ ವಿಶೇಷವಾಗಿ ವಿಶ್ ಮಾಡಿದ್ದಾರೆ. ಐರಾಳ (Ayra) ತುಂಟತನದ ಚೆಂದದ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.
View this post on Instagram
ಇನ್ನೂ ಯಶ್ ಅವರು ‘ಟಾಕ್ಸಿಕ್’ (Toxic) ಸಿನಿಮಾದ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ನಟನ ಕುಟುಂಬ ಕೂಡ ಯಶ್ ಜೊತೆ ಮುಂಬೈನಲ್ಲಿದ್ದಾರೆ. ಇಂದು ಮಗಳ (Ayra) ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಲಿದ್ದಾರೆ.