ಶೋಭಿತಾ ಸೂಸೈಡ್ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ: ಗೀತಾ ಭಾರತಿ ಭಟ್ ಭಾವುಕ

Public TV
1 Min Read
shobhitha 1

ಕಿರುತೆರೆ ನಟಿ ಶೋಭಿತಾ (35) ಹೈದರಾಬಾದ್‌ನಲ್ಲಿ ಇಂದು (ಡಿ.1) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರಲ್ಲ ಎಂದು ‘ಬ್ರಹ್ಮಗಂಟು’ ಸಹನಟಿ ಗೀತಾ (Geetha Bharathi Bhat) ಪ್ರತಿಕ್ರಿಯಿಸಿದ್ದಾರೆ. ‘ಬ್ರಹ್ಮಗಂಟು’ (Brahmagantu) ಸೀರಿಯಲ್‌ನಲ್ಲಿ ಶೋಭಿತಾ ಜೊತೆ ನಟಿಸಿದ ದಿನಗಳನ್ನು ಗೀತಾ ಸ್ಮರಿಸಿದ್ದಾರೆ.

shobhitha shivanna

ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರು ಅಲ್ಲ. ನಾವಿಬ್ಬರೂ ‘ಬ್ರಹ್ಮಗಂಟು’ ಸೀರಿಯಲ್ ಮಾಡಬೇಕಾದರೆ, ಬೇರೆ ಯಾರೋ ಸೀರಿಯಲ್ ಆರ್ಟಿಸ್ಟ್ ಸೂಸೈಡ್ ಸುದ್ದಿ ಕೇಳಿ ಈ ರೀತಿ ಮಾಡಿಕೊಳ್ಳುವುದು ತಪ್ಪು ಎಂದು ಶೋಭಿತಾ ಚರ್ಚಿಸಿದರು. ಆದರೆ ಇವರ ಸುದ್ದಿ ಈ ತರಹ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಈಗಲೂ ಅವರ ಆತ್ಮಹತ್ಯೆಯ ಸುದ್ದಿ ನಂಬೋಕೆ ತುಂಬಾ ಕಷ್ಟ ಆಗುತ್ತಿದೆ ಎಂದು ನಟಿ ಗೀತಾ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಮಾಡದಿರಲು ಕಾರಣ ಬಿಚ್ಚಿಟ್ಟ ಐಕಾನ್ ಸ್ಟಾರ್

shobhitha

ಶೋಭಿತಾ ಮದುವೆಯಾದ್ಮೇಲೆ ನನ್ನ ಜೊತೆ ಸಂಪರ್ಕ ಇರಲಿಲ್ಲ. ನಾನು ಅವರನ್ನು ಕಡೆಯದಾಗಿ ಭೇಟಿ ಆಗಿದ್ದು, ಅವರ ಮದುವೆಗೂ ಮುಂಚೆ, ಆ ನಂತರ ಅವರು ಸಿಗಲಿಲ್ಲ. ಅವರಿಗೆ ಅದೇನು ಕಷ್ಟು ಇತ್ತು ಎಂಬುದು ಗೊತ್ತಿಲ್ಲ. ಅವರ ಕಷ್ಟ ಏನಿತ್ತು ಅವರು ಯಾರ ಹತ್ತಿರ ಆದ್ರೂ ಹೇಳಿಕೊಳ್ಳಬೇಕಿತ್ತು. ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ.

shobhitha

ಅವರ ಕುಟುಂಬವನ್ನು ಶೋಭಿತಾ ನೋಡಿಕೊಳ್ಳುತ್ತಿದ್ದರು. ಅವರು ತುಂಬಾ ಸ್ವಾಭಿಮಾನಿಯಾಗಿದ್ದರು. ಅವರು ತುಂಬಾ ಸ್ಟ್ರಾಂಗ್ ವ್ಯಕ್ತಿ ಆಗಿದ್ದರು. ಅವರು ಈ ಮಟ್ಟಕ್ಕೆ ಕುಗ್ಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದರೆ ನಂಬೋಕೆ ಆಗುತ್ತಿಲ್ಲ ಎಂದು ನಟಿ ಭಾವುಕರಾಗಿದ್ದಾರೆ.

ಅಂದಹಾಗೆ, ‘ಬ್ರಹ್ಮಗಂಟು’ ಸೀರಿಯಲ್ ಸೇರಿದಂತೆ 12 ಸೀರಿಯಲ್‌ಗಳಲ್ಲಿ ಶೋಭಿತಾ ನಟಿಸಿದರು. ಜಾಕ್‌ಪಾಟ್, ವಂದನಾ, ಅಟೆಂಪ್ಟ್ ಟು ಮರ್ಡರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share This Article