ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮಾಜಿ ಎಂಎಲ್‌ಸಿ ಘೋಟ್ನೇಕರ್

Public TV
1 Min Read
S.L.Ghotnekar

ಕಾರವಾರ: ರಾಜ್ಯದಲ್ಲಿ ಜೆಡಿಎಸ್‌ನಲ್ಲಿ ಭಿನ್ನಮತ ಏಳುತ್ತಿದ್ದಂತೆ ಇತ್ತ ಜೆಡಿಎಸ್ ನಾಯಕರು ಬಿಜೆಪಿಯತ್ತ ವಾಲುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡ ಹಾಗೂ ಮಾಜಿ ಎಂಎಲ್‌ಸಿ ಎಸ್.ಎಲ್.ಘೋಟ್ನೇಕರ್ ಬಿಜೆಪಿ ಸೇರಿದ್ದಾರೆ.

ಶನಿವಾರ ಶಿರಸಿಯ ಬಿಜೆಪಿ ಕಚೇರಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ನೇತೃತ್ವದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.

ಹಳಿಯಾಳದ ಮರಾಠ ಮುಖಂಡ ಹಾಗೂ ಎರಡು ಬಾರಿ ಎಂಎಲ್‌ಸಿ ಜೊತೆಗೆ ಜಿಲ್ಲಾ KDC ಬ್ಯಾಂಕ್‌ನಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದ ಎಸ್.ಎಲ್.ಘೋಟ್ನೇಕರ್ ಇದೀಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದರು.

ಘೋಟ್ನೇಕರ್ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಂತೆ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ವಿರೋಧ ವ್ಯಕ್ತಪಡಿಸಿದ್ದು, ಸೇರ್ಪಡೆ ಕಾರ್ಯಕ್ರಮಕ್ಕೂ ಗೈರಾಗಿದ್ದರು‌. ಹೀಗಾಗಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಎರಡು ಹೋಳಂತಾಗಿದ್ದು, ಅಸಮಾಧಾನ ಬುಗಿಲೆದ್ದಿದೆ.

Share This Article