ಚಿಕ್ಕಮಗಳೂರು: ಕೇರಳದಲ್ಲಿ (Kerala) ಉಳಿಯೋದು ಕಷ್ಟ ಎಂದು ಕಾಫಿನಾಡಿಗೆ ಬಂದಿದ್ದ ಕೆಂಪು ಉಗ್ರರು ಒಂದೇ ಒಂದು ಎನ್‌ಕೌಂಟರ್‌ಗೆ ಮತ್ತೆ ಕೇರಳ ಸೇರಿಕೊಂಡಿರುವ ಅನುಮಾನ ಮೂಡಿದೆ.
ಕಾಫಿನಾಡು-ಕೃಷ್ಣನಗರಿಯಲ್ಲಿ ನಕ್ಸಲರ ಹೆಜ್ಜೆಗುರುತು ಸಿಕ್ಕ 15-20 ದಿನದಲ್ಲೇ ನಕ್ಸಲ್ ನಾಯಕ ವಿಕ್ರಂಗೌಡ (Vikram Gowda) ಎಎನ್‌ಎಫ್ (ANF) ಗುಂಡಿಗೆ ಕಾಡಲ್ಲೇ ಹತನಾದ. ಕಾಫಿನಾಡ ಕಾಡಲ್ಲಿ ಕಣ್ಮರೆಯಾದ ಮುಂಡಗಾರು ಲತಾ ಆ್ಯಂಡ್ ಟೀಂ ಪತ್ತೆಯೇ ಇಲ್ಲ. ಇತ್ತ ಕಾಡಲ್ಲಿ ಓಡಿಹೋದ ವಿಕ್ರಂಗೌಡನ ಜೊತೆಗಿದ್ದ ಸಹಚರರ ಸುಳಿವೂ ಇಲ್ಲ. ಹಾಗಾದರೇ ನಕ್ಸಲರು ಜೀವಭಯದಲ್ಲಿ ಮತ್ತೆ ಕೇರಳ ಸೇರಿಕೊಂಡರಾ ಎಂಬ ಅನುಮಾನ ಬಲವಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಾಕ್ ಪ್ರಜೆಗಳ ಬಂಧನ ಕೇಸ್ – 1,350ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಕಾಫಿನಾಡಲ್ಲಿ ಕಳೆದೊಂದು ದಶಕದಿಂದ ನಕ್ಸಲರ ಹೆಜ್ಜೆ ಗುರುತುಗಳೇ ಇರಲಿಲ್ಲ. ದಶಕಗಳ ಬಳಿಕ ಕೆಂಪು ಉಗ್ರರು ಕಾಫಿನಾಡು ಕಾಡಲ್ಲಿ ಓಡಾಡಿದ್ದರು. ಎರಡೇ ತಿಂಗಳಿಗೆ ಮತ್ತೆ ಇಲ್ಲದಂತಾಗಿರೋದು ನಿಜಕ್ಕೂ ಆಶ್ಚರ್ಯ. ಆದರೆ ದಶಕದಿಂದ ನಕ್ಸಲರು ಇಲ್ಲದ ಕಾರಣ ಕಾರ್ಕಳದ ಎಎನ್‌ಎಫ್ ಕ್ಯಾಂಪನ್ನು ಮಡಿಕೇರಿಗೆ ವರ್ಗಾಯಿಸೋ ಮಾತುಗಳು ಕೇಳಿ ಬಂದಿದ್ದವು. ಆದರೆ ಹಿಟ್‌ಲಿಸ್ಟ್ ನಕ್ಸಲರು ಸಿಗದ ಕಾರಣ ಆ ಪ್ರಸ್ತಾವನೆ ಹಾಗೇ ಉಳಿದಿತ್ತು. ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಬಂದ ನಕ್ಸಲರು 2 ತಂಡ ಮಾಡಿಕೊಂಡು ಉಡುಪಿ-ಚಿಕ್ಕಮಗಳೂರು ಸೇರಿದ್ದರು. ಮುಂಡಗಾರು ಲತಾ ಕಾಡಲ್ಲಿ ಕಾಣೆಯಾದ ಬೆನ್ನಲ್ಲೇ ವಿಕ್ರಂಗೌಡ ಉಡುಪಿಯಲ್ಲಿ ಎನ್‌ಕೌಂಟರ್ ಆದ. ಅದಾದ ಬಳಿಕ ಎಎನ್‌ಎಫ್ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಲ್ಲಿ ಕೂಂಬಿಂಗ್ ಚುರುಕುಗೊಳಿಸಿದರು. ಆದರೆ ಮುಂಡಗಾರು ಲತಾ ಟೀಂ ಹಾಗೂ ಕಾಡಲ್ಲಿ ಓಡಿಹೋದ ವಿಕ್ರಂಗೌಡನ ಸಹಚರರ ಸುದ್ದಿಯೇ ಇಲ್ಲದಂತಾಗಿರೋದು ಜೀವ ಭಯದಿಂದ ನಕ್ಸಲರು ಮತ್ತೆ ಕೇರಳ ಕಾಡು ಸೇರಿಕೊಂಡಿರಬಹುದಾ ಎಂಬ ಪ್ರಶ್ನೆ ಮೂಡಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ | ಬಸ್ ಪಲ್ಟಿ – 12 ಮಂದಿ ಸಾವು, 30 ಜನರಿಗೆ ಗಾಯ
ಈ ರೀತಿಯ ಜಿಜ್ಞಾಸೆಯೊಂದು ನಕ್ಸಲರನ್ನು ಕಾಡತೊಡಗಿದೆ. ಏಕೆಂದರೆ 10 ವರ್ಷಗಳ ಬಳಿಕ ಕರ್ನಾಟಕಕ್ಕೆ ಬಂದ ಎರಡೇ ತಿಂಗಳಿಗೆ ಅತ್ತ ಉಡುಪಿ-ಇತ್ತ ಚಿಕ್ಕಮಗಳೂರಲ್ಲಿ ಪೊಲೀಸರು ನಕ್ಸಲರ ಬೆನ್ನು ಬಿದ್ದಿದ್ದಾರೆ. ಅಂದರೆ ಅಲ್ಲಿಗೆ ಮಲೆನಾಡಿಗರೇ ಬೆಂಬಲ ಇಲ್ಲ ಎಂದೇ ಅರ್ಥ. ಹಾಗಾಗಿಯೇ ಅವರು ಬಂದ ಒಂದೂವರೆ ತಿಂಗಳಿಗೆ ಒಂದು ಎನ್‌ಕೌಂಟರ್ ಆಗಿದೆ. ವಿಕ್ರಂಗೌಡ ಎನ್‌ಕೌಂಟರ್ ಆದ ಬೆನ್ನಲ್ಲಿ ಮತ್ತೆ ನಕ್ಸಲರ ವದಂತಿಗಳೇ ಇಲ್ಲದಂತಾಗಿದೆ. ಹಾಗಾಗಿ ಎನ್‌ಕೌಂಟರ್ ಬಳಿಕ ನೋ ಸರೆಂಡರ್ ಎಂದು ಎಎನ್‌ಎಫ್ ಕೂಂಬಿಂಗ್ ಕಂಡು ನಕ್ಸಲರು ಜೀವ ಭಯದಲ್ಲಿ ಮತ್ತೆ ಕೇರಳದತ್ತ ಹೆಜ್ಜೆ ಹಾಕಿರಬಹುದು ಎಂಬ ಅನುಮಾನ ಬಲವಾಗಿವೆ. ಇದನ್ನೂ ಓದಿ: ಪಕ್ಕದ ಮನೆಗೆ ಕನ್ನ ಹಾಕಿ ಪೊಲೀಸರ ಅತಿಥಿಯಾದ ಬೆಂಗ್ಳೂರು ನೆಂಟ!
ಒಟ್ಟಾರೆ, 2002ರಿಂದ 2013-14ರವರೆಗೆ ನಿರಂತರವಾಗಿದ್ದ ನಕ್ಸಲ್ ಚಟುವಟಿಕೆ 2014ರ ಬಳಿಕ ಸಂಪೂರ್ಣ ನಿಂತೇ ಹೋಗಿತ್ತು. ನಕ್ಸಲರೆಲ್ಲಾ ಕೇರಳ ಸೇರಿಕೊಂಡಿದ್ದರು. ಆದರೆ 2024ರಲ್ಲಿ ಕರ್ನಾಟಕಕ್ಕೆ ಬಂದ ಒಂದೂವರೆ-ಎರಡು ತಿಂಗಳಲ್ಲೇ ಒಂದು ಎನ್‌ಕೌಂಟರ್ ನಕ್ಸಲರ ನಿದ್ದೆಗೆಡಿಸಿ, ಜೀವಭಯ ತರಿಸಿದಂತೆ ಕಾಣುತ್ತಿದೆ. ಹಾಗಾಗಿ ಮತ್ತೆ ಕೇರಳದತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿ : ಶಾಸಕ ರಾಜು ಕಾಗೆ