ಸಿಎಂ ಇರೋ ಕೆಲಸ ಮೊದಲು ಮಾಡಲಿ, ರಾಜ್ಯಪಾಲರ ಕೆಲಸ ಯಾಕೆ ಕಡಿತ ಮಾಡ್ತೀರಾ? – ಅಶ್ವಥ್ ನಾರಾಯಣ ಕಿಡಿ

Public TV
1 Min Read
Ashwath Narayan 1

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಕುಲಾಧಿಪತಿ ಅಧಿಕಾರವನ್ನು ರಾಜ್ಯಪಾಲರಿಂದ ಸಿಎಂಗೆ ನೀಡಿರುವ ಸಂಪುಟ ನಿರ್ಧಾರವನ್ನು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (CN Ashwath Narayan) ಖಂಡಿಸಿದ್ದಾರೆ.ಇದನ್ನೂ ಓದಿ: ದೆಹಲಿಯಲ್ಲಿ ಮೋದಿ ಭೇಟಿಯಾದ ಸಿಎಂ – ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಬಿಡುಗಡೆಗೆ ಮನವಿ

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೇ ಪಾಪ ಮುಖ್ಯಮಂತ್ರಿಗಳಿಗೆ ಇರುವುದನ್ನು ನೋಡಲು ಸಮಯ ಇಲ್ಲ. ಇದನ್ನೆಲ್ಲಾ ಯಾಕೆ ತೆಗೆದುಕೊಳ್ಳುತ್ತೀರಾ? ಶಿಕ್ಷಣದ ವಿರೋಧಿಗಳು ನೀವು, ನಿಮಗೆ ರಾಷ್ಟ್ರೀಯ ಶಿಕ್ಷಣ ನೀತಿ ಬೇಡ, ಬಡವರಿಗೆ ನ್ಯಾಯ ಕೊಡುವುದು ಬೇಡ. ಸಿದ್ದರಾಮಯ್ಯನವರೇ ನೀವು ಮತ್ತು ನಿಮ್ಮ ಸಂಪುಟ ಸಹೋದ್ಯೋಗಿಗಳು ನೀವು ಪಡೆದ ಶಿಕ್ಷಣದಿಂದ ಇಂದು ಎತ್ತರದ ಸ್ಥಾನದಲ್ಲಿದ್ದೀರಿ. ನೀವು ಕುಲಾಧಿಪತಿಗಳಾಗಿ ಮಾಡುವುದು ಏನೂ ಇಲ್ಲ. ಇಂತಹ ಪ್ರಯತ್ನ, ರಾಜಕೀಯ ಬಿಟ್ಟುಬಿಡಿ ಎಂದರು.

ಈಗಲೇ ನಿಮಗೆ ಪುರುಸೊತ್ತಿಲ್ಲ ಇದಕ್ಕೆಲ್ಲಾ ಹೋಗಬೇಡಿ. ಇರುವುದನ್ನು ಮುಂದುವರಿಯಲು ಬಿಟ್ಟು ನಿಮ್ಮ ಟೇಬಲ್ ಮೇಲೆ ಇರುವುದನ್ನು ಸರಿ ಮಾಡಿ ಎಂದು ಕಿಡಿಕಾರಿದರು.ಇದನ್ನೂ ಓದಿ: ಮುಡಾದ 50:50 ಸೈಟು ಹಂಚಿಕೆಯಲ್ಲಿ ಹಗರಣ ಆಗಿದೆ: ಯತೀಂದ್ರ ಸಿದ್ದರಾಮಯ್ಯ

Share This Article