ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದೆ ಎಕ್ಸಾಂ

Public TV
2 Min Read
SSLC 4

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಲಿದೆ. ಪಿಯುಸಿ ಪರೀಕ್ಷೆಯಂತೆಯೇ ಹೆಚ್ಚಿನ ಭದ್ರೆತಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ಮೇಲೆ ಹದ್ದಿನ ಕಣ್ಣಿಡಲಾಗಿದೆ.

SSLC

ಮೊನ್ನೆಯಷ್ಟೆ ಪಿಯುಸಿ ಎಕ್ಸಾಂ ಮುಗಿದ ನಂತ್ರ ಇಂದಿನಿಂದ ವಿದ್ಯಾರ್ಥಿ ಜೀವನದ ಮತ್ತೊಂದು ಪ್ರಮುಖ ಪರೀಕ್ಷೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಮೊದಲ ದಿನವಾದ ಇಂದು ಪ್ರಥಮ ಭಾಷೆಯ ಪರೀಕ್ಷೆಗಳು ನಡೆಯಲಿದ್ದು, ಏಪ್ರಿಲ್ 12ಕ್ಕೆ ಪರೀಕ್ಷೆ ಮುಕ್ತಾಯವಾಗಲಿದೆ. ಬೆಳಗ್ಗೆ 9.30 ರಿಂದ 12.30ರ ಒಳಗೆ ಪರೀಕ್ಷೆ ನಡೆಯಲಿದೆ.

SSLC 5

ಈ ಬಾರಿ ಒಟ್ಟು 877174 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದ್ರಲ್ಲಿ 4,69,835 ಬಾಲಕರು ಹಾಗೂ 4 ಲಕ್ಷದ 7 ಸಾವಿರ 339 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 2770 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

SSLC 2

ಕಳೆದ ಹಲವು ವರ್ಷಗಳಿಂದ ಇದ್ದ ಪರೀಕ್ಷಾ ವಿಧಾನವನ್ನು ಈ ಬಾರಿ ಬದಲಾವಣೆ ಮಾಡಲಾಗಿದೆ. ಉತ್ತರ ಪತ್ರಿಕೆಯಲ್ಲೇ ಪ್ರಶ್ನೆಗಳು ಇರುತ್ತಿದ್ದ ವಿಧಾನ ಬದಲಾಯಿಸಿ ಪ್ರತ್ಯೇಕವಾಗಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಪಿಯುಸಿ ಪರೀಕ್ಷೆಯಂತೆ ಕರ್ನಾಟಕ ಸೆಕ್ಯೂರ್ ಎಕ್ಸಾಂಮಿನೇಷನ್ ಸಿಸ್ಟಮ್ ಪ್ರೋಗ್ರಾಂನ್ನ ಅಳವಡಿಸಿಕೊಂಡಿದ್ದು, ಸಿಸಿಟಿವಿ ಕಣ್ಗಾವಲುಗಳಲ್ಲಿ ಪರೀಕ್ಷೆ ನಡೆಯಲಿದೆ ಅಂತಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ ತಿಳಿಸಿದ್ದಾರೆ.

SSLC 3

ಒಟ್ಟಿನಲ್ಲಿ ಭದ್ರಕೋಟೆ ಮಧ್ಯೆ ಇಂದಿನಿಂದ ಪರೀಕ್ಷೆ ನಡೆಯಲಿದ್ದು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಕೆಲವು ಟಿಪ್ಸ್ ಇಲ್ಲಿದೆ.

* ಪರೀಕ್ಷಾ ಹಿಂದಿನ ದಿಣ ಚೆನ್ನಾಗಿ ನಿದ್ರೆ ಮಾಡಿ. ನಿದ್ರೆ ಕೆಟ್ಟು ಓದಬೇಡಿ
* ಹಾಲ್ ಟಿಕೆಟ್, ಪರೀಕ್ಷಾ ಸಾಮಾಗ್ರಿಗಳನ್ನ ಹಿಂದಿನ ದಿನವೇ ಜೋಡಿಸಿಕೊಳ್ಳಿ
* ಪರೀಕ್ಷಾ ಕೇಂದ್ರಕ್ಕೆ 20 ನಿಮಿಷ ಮುಂಚಿತವಾಗಿ ಹೋಗಿ ನಿಮ್ಮ ಸೆಂಟರ್ ಖಚಿತಪಡಿಸಿಕೊಳ್ಳಿ
* ಪ್ರಶ್ನೆ ಪತ್ರಿಕೆ ನೀಡಿದ ಬಳಿಕ 15 ನಿಮಿಷ ವಿವರವಾಗಿ ಓದಿ ಅರ್ಥ ಮಾಡಿಕೊಳ್ಳಿ
* ಮೊದಲ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. ನಂತರ ಉಳಿಕೆ ಪ್ರಶ್ನೆಗಳಿಗೆ ಉತ್ತರಿಸಿ
* ಉತ್ತರ ಬರೆದ ನಂತ್ರ ಕೊನೆಯದಾಗಿ ನೋಂದಣಿ ಸಂಖ್ಯೆ,ಸೂಚಿಸಿದ ಮಾಹಿತಿ ನಮೂದಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಿ

SSLC 6

ಒಟ್ಟಾರೆ ಯಾವುದೇ ಅಕ್ರಮಗಳು ನಡೆಯದಂತೆ ಬಿಗಿಭದ್ರತೆಯಲ್ಲಿ ಪರೀಕ್ಷೆ ನಡೆಯುತ್ತಿದ್ದು, ಮಕ್ಕಳು ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪಬ್ಲಿಕ್ ಟಿವಿ ಕಡೆಯಿಂದ ಆಲ್ ದಿ ಬೆಸ್ಟ್.

Share This Article
Leave a Comment

Leave a Reply

Your email address will not be published. Required fields are marked *