ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ‘ಪುಷ್ಪ 2’ (Pushpa 2) ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ‘ಪುಷ್ಪ’ ಸಿನಿಮಾದ ಜರ್ನಿ ನೆನೆದು ಭಾವುಕರಾಗಿದ್ದಾರೆ. ‘ಪುಷ್ಪ’ ಪಾರ್ಟ್ 3 ಬಗ್ಗೆ ಹಿಂಟ್ ಕೊಟ್ಟಿರೋದಲ್ಲದೇ, 5 ವರ್ಷಗಳ ಈ ಚಿತ್ರದ ಜರ್ನಿ ಕೊನೆ ಆಗಿದೆ. ಎಂಥ ಅದ್ಭುತ ಜರ್ನಿ ಎಂದು ನಟಿ ಎಮೋಷನಲ್ ಆಗಿದ್ದಾರೆ. ಇದನ್ನೂ ಓದಿ:ಮದುವೆಗೆ ಸಜ್ಜಾದ ನಟಿ- ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಕೀರ್ತಿ ಸುರೇಶ್
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ‘ಪುಷ್ಪ 2’ ಸಿನಿಮಾ ಬಗ್ಗೆ ಸ್ಪೆಷಲ್ ನೋಟ್ ಬರೆದಿದ್ದಾರೆ. ನ.25ರಂದು ಪುಷ್ಪ 2 ಚಿತ್ರ ಸಂಪೂರ್ಣ ಆಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕೆರಿಯರ್‌ನ ಏಳೆಂಟು ವರ್ಷದಲ್ಲಿ ಕಳೆದ 5 ವರ್ಷ ‘ಪುಷ್ಪ 2’ ಸೆಟ್ ನನ್ನ ಮನೆಯಾಗಿತ್ತು. ಅಂತೂ ಇದು ನನ್ನ ಕೊನೆಯ ದಿನ. ಪಾರ್ಟ್ 3 (Pushpa 3) ಸಂಬಂಧಿಸಿ ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ. ಆದರೂ ನನಗೆ ಇದು ವಿಶೇಷವಾಗಿ ಅನಿಸುತ್ತಿದೆ. ಇದು ಕೊನೆಯಾಗುತ್ತಿದೆ ಎನ್ನುವ ಭಾವನೆ ಬಂದಿದೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಈ ಮೂಲಕ ಪಾರ್ಟ್ -3 ಬರೋದು ಸ್ಪಷ್ಟವಾಗಿದೆ.
ನನಗೂ ಅರ್ಥವಾಗದಂತಹ ನೋವು ನನ್ನನ್ನು ಕಾಡುತ್ತಿದೆ. ಎಲ್ಲಾ ಭಾವನೆಗಳು ಈಗ ಒಟ್ಟಾಗಿವೆ. ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ದಿನಗಳು ನೆನಪಾಗುತ್ತಿವೆ. ಆ ದಿನಗಳಲ್ಲಿ ನಾನು ತುಂಬಾ ದಣಿದಿದ್ದೆ. ಈಗ ಎಲ್ಲಾ ನೆನಪಿಸಿಕೊಂಡರೆ ಎಲ್ಲಾ ಅದ್ಭುತ ಎನಿಸುತ್ತಿದೆ ಎಂದಿದ್ದಾರೆ. ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ (Allu Arjun) ಮತ್ತು ಇಡೀ ತಂಡಕ್ಕೆ ನಟಿ ಧನ್ಯವಾದ ತಿಳಿಸಿದ್ದಾರೆ. ನಟಿಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
View this post on Instagram
ಅಂದಹಾಗೆ, ಇತ್ತೀಚೆಗೆ ‘ಪುಷ್ಪ 3’ ಬರೋದಾಗಿ ಚಿತ್ರದ ನಿರ್ಮಾಪಕ ಸುಳಿವು ನೀಡಿದ್ದರು. ರಶ್ಮಿಕಾ ಪೋಸ್ಟ್‌ನಿಂದ ಮತ್ತೊಮ್ಮೆ ಅಧಿಕೃತ ಮಾಹಿತಿ ಸಿಕ್ಕಿದೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಪುಷ್ಪರಾಜ್ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾ ಜೀವತುಂಬಿದ್ದರು. ಇದೇ ಡಿ.5ಕ್ಕೆ ‘ಪುಷ್ಪ 2’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಶ್ರೀಲೀಲಾ (Sreeleela) ‘ಕಿಸ್ಸಿಕ್’ ಸಿನಿಮಾದಲ್ಲಿನ ಮತ್ತೊಂದು ಹೈಲೆಟ್ ಆಗಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.