ಬಾಂಗ್ಲಾ-ಪಾಕ್‌ ಲವ್‌ಸ್ಟೋರಿ – ಭಾರತಕ್ಕೆ ಇರೋ ಆತಂಕ ಏನು?

Public TV
6 Min Read
Bangladesh And Pakistan

1971ರ ವಿಮೋಚನಾ ಯುದ್ಧದ ನಂತರ ಬದ್ಧ ವೈರಿಗಳಾಗಿದ್ದ ಪಾಕ್‌ – ಬಾಂಗ್ಲಾದೇಶ (Pakistan – Bangladesh) ಇದೀಗ ಆಪ್ತಮಿತ್ರರಾಗುತ್ತಿವೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ನೇರ ಸಮುದ್ರ ವ್ಯಾಪಾರ ಶುರುವಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಹೌದು. ಪಾಕಿಸ್ತಾನದ ಮೊದಲ ಸರಕು ಹಡಗು ಕಳೆದ ವಾರ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರು ತಲುಪಿದೆ. ಇದು ದ್ವಿಪಕ್ಷೀಯ ಸಂಬಂಧಲ್ಲಿ ಪ್ರಮುಖ ಹೆಜ್ಜೆ ಎಂದು ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅಹ್ಮದ್ ಮರೂಫ್ ಹೇಳಿದ್ದಾರೆ. ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಪದಚ್ಯುತಿ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ.

ಪ್ರಧಾನಿ ಮುಹಮ್ಮದ್‌ ಯೂನಸ್‌ (Muhammad Yunus) ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ಅವರನ್ನು ಭೇಟಿಯಾಗಿದ್ದರು. ಅಲ್ಲಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಮಾತುಕತೆ ನಡೆಸಿದ್ದು, ಇದು ಹೊಸ ಅಧ್ಯಾಯ ಶುರು ಮಾಡುವ ಅಗತ್ಯತೆಗಳ ಬಗ್ಗೆ ಒತ್ತಿ ಹೇಳಿದ್ದರು. ಈ ಬೆನ್ನಲ್ಲೇ ಪಾಕ್‌ ಮತ್ತು ಬಾಂಗ್ಲಾ ನಡುವಿನ ನೇರ ವ್ಯಾಪಾರ ಶುರುವಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್‌ ಕೃಷ್ಣ ದಾಸ್ ಅರೆಸ್ಟ್‌

Bangladesh news interim govt threatens media shutdown Muhammad Yunus

1971ರ ವಿಮೋಚನಾ ಯುದ್ಧದ ನಂತರ ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಇದು ಮೋದಲ ನೇರ ಸರಕು ಸಾಗಣೆಯಾಗಿದೆ. ಕರಾಚಿ ಬಂದರಿನಿಂದ ನಮ್ಮ ಜವಳಿ ಮತ್ತು ಸೆರಾಮಿಕ್ ಕೈಗಾರಿಕೆಗಳಿಗೆ ಕಚ್ಛಾವಸ್ತುಗಳನ್ನು ಸಾಗಿಸಲಾಗಿದೆ ಎಂದು ಚಿತ್ತಗಾಂಗ್ (Chittagong Port) ಬಂದರು ಪ್ರಾಧಿಕಾರದ ಅಧಿಕಾರಿ ಹೇಳಿದ್ದಾರೆ. 1971ರಲ್ಲಿ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನಗಳ ನಡುವೆ ಯುದ್ಧ ನಡೆದು ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶ ಎಂಬ ಹೆಸರಿನಲ್ಲಿ ಸ್ವತಂತ್ರ ದೇಶವಾಯಿತು. ಆ ನಂತರ ಎರಡು ದೇಶಗಳ ನಡುವೆ ನೇರ ಸರಕು ವ್ಯಾಪಾರ ಸ್ಥಗಿತಗೊಂಡಿತ್ತು. ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸರಕುಗಳನ್ನು ಶ್ರೀಲಂಕಾ, ಸಿಂಗಾಪುರ ಅಥವಾ ಮಲೇಶ್ಯಾದಂತಹ ಮೂರನೇ ದೇಶದ ಮೂಲಕ ಹಡಗಿನಲ್ಲಿ ಸಾಗಿಸಲಾಗುತ್ತಿತ್ತು. ಆದ್ರೆ ಉಭಯ ದೇಶಗಳ ನಡುವೆ ಇದೇ ಮೊದಲಬಾರಿಗೆ ನೇರ ಸರಕು ವ್ಯಾಪಾರ ಶುರುವಾಗಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ಬಾಂಗ್ಲಾ ಮತ್ತು ಪಾಕಿಸ್ತಾನ ನಡುವಿನ ನೇರ ವ್ಯಾಪಾರ ಭಾರತಕ್ಕೆ ಸಮಸ್ಯೆ ತಂದೊಡ್ಡಲಿದೆಯೇ ಎಂಬ ಆತಂಕ ಶುರುವಾಗಿದೆ. ಅಷ್ಟಕ್ಕೂ ಪಾಕ್‌, ಬಾಂಗ್ಲಾ ನಡುವೆ ವ್ಯಾಪಾರ ಶುರುವಾಗಲು ಕಾರಣ ಏನು? ಇವೆರಡರ ನಡುವಿನ ಸಂಬಂಧ ಭಾರತಕ್ಕೆ ಏಕೆ ಸಮಸ್ಯೆ ಉಂಟು ಮಾಡುತ್ತದೆ ಎಂಬುದನ್ನು ತಿಳಿಯೋಣ… ಅದಕ್ಕೂ ಮುನ್ನ 1971ರ ವಿಮೋಚನಾ ಯುದ್ಧದ ಬಗ್ಗೆ ತಿಳಿಯೋಣ….

Chittagong Port 2

1971ರ ವಿಮೋಚನಾ ಯುದ್ಧದಲ್ಲಿ ಏನಾಯ್ತು?

1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಅದನ್ನು ಪೂರ್ವ ಪಾಕಿಸ್ತಾನ ಎಂದೇ ಕರೆಯಲಾಗುತ್ತಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಸೇನಾಪಡೆ ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಇದರಿಂದಾಗಿ ಸುಮಾರು 30 ಲಕ್ಷ ಮಂದಿ ಜೀವ ಕಳೆದುಕೊಂಡರು, ಸಾವಿರಾರು ಜನ ಚಿತ್ರಹಿಂಸೆ ಅನುಭವಿಸಿದರು, ಮಹಿಳೆಯರು ಅತ್ಯಾಚಾರಕ್ಕೂ ಒಳಗಾದರು. ಈ ವೇಳೆ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ನಡೆಸುತ್ತಿದ್ದ ಕೃತ್ಯವನ್ನು ವಿರೋಧಿಸಿದ ಬಾಂಗ್ಲಾದೇಶಕ್ಕೆ ಭಾರತ ಬೆಂಬಲ ನೀಡಿತ್ತು. ಇದನ್ನೂ ಓದಿ: ಬಾಂಗ್ಲಾದಲ್ಲಿ ಈಗ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ, ಮೂವರು ಸಾವು – ಆಸ್ಪತ್ರೆಗೆ 35 ಕೋಟಿ ನಷ್ಟ

ಬಾಂಗ್ಲಾದೇಶ ವಿಮೋಚನೆಗೆ ಭಾರತ ಬೆಂಬಲ ನೀಡಿದ್ದು, ಪಾಕಿಸ್ತಾನದ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್‌ಗೆ ತೀವ್ರ ಹಿನ್ನಡೆಯಾದಂತಾಗಿತ್ತು. ಅಲ್ಲದೇ 1971ರ ಡಿಸೆಂಬರ್ 3ರಂದು ಪೂರ್ವ ಪಾಕಿಸ್ತಾನದ ಜನರನ್ನು ರಕ್ಷಿಸುವ ನಿಟ್ಟನಲ್ಲಿ ಪಾಕಿಸ್ತಾನದ ವಿರುದ್ಧ ಸಮರ ನಡೆಸಲು ಸಜ್ಜಾಗಿ ಎಂದು ಭಾರತೀಯ ಸೇನೆಗೆ ಭಾರತದ ಸರ್ಕಾರ ಆದೇಶ ನೀಡಿತ್ತು. ಬಂಗಾಳಿ ಮುಸ್ಲಿಮರು ಮತ್ತು ಹಿಂದೂಗಳನ್ನು ರಕ್ಷಿಸುವ ನಿಟ್ಟಿನಲ್ಲಿ 1971ರ ಡಿಸೆಂಬರ್ 03ರಂದು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸಲು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಇದನ್ನೂ ಓದಿ: ಮತ್ತೆ ಕೆಣಕಿದ ಹಿಜ್ಬುಲ್ಲಾ – 250 ರಾಕೆಟ್‌,‌ ಡೆಡ್ಲಿ ಡ್ರೋನ್‌ಗಳಿಂದ ಇಸ್ರೇಲ್‌ ಮೇಲೆ ಭೀಕರ ದಾಳಿ

Bangladesh And Pakistan War 1

ಬಾಂಗ್ಲಾ ವಿಮೋಚನೆಯ ಹಾದಿ

* 1947: ಭಾರತದಲ್ಲಿ ಬ್ರಿಟಿಷರ ಅಧಿಪತ್ಯ ಅಂತ್ಯವಾಗಿ, ದೇಶವು ವಿಭಜನೆಯಾಯಿತು. ಬಹುಸಂಖ್ಯಾತ ಮುಸ್ಲಿಮರಿಂದ ಕೂಡಿದ ‘ಪಾಕಿಸ್ತಾನ’ ಉದಯವಾಯಿತು
* 1949: ಪಶ್ಚಿಮ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಪೂರ್ವ ಪಾಕಿಸ್ತಾನವನ್ನು ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ʻಅವಾಮಿ ಲೀಗ್ ಸಂಘಟನೆʼ ಹುಟ್ಟಿಕೊಂಡಿತು
* 1970: ಪೂರ್ವ ಪಾಕಿಸ್ತಾನದಲ್ಲಿ ನಡೆದ ಚುನಾವಣೆಗಳಲ್ಲಿ ಅವಾಮಿ ಲೀಗ್ ಪ್ರಚಂಡ ಜಯಭೇರಿ ಬಾರಿಸಿತು. ಆದರೆ ಫಲಿತಾಂಶವನ್ನು ಒಪ್ಪಲು ಪಶ್ಚಿಮ ಪಾಕಿಸ್ತಾನ ಸಿದ್ಧವಿರಲಿಲ್ಲ. ಇದು ಗಲಭೆಗೆ ಕಾರಣವಾಯಿತು. ಈ ವೇಳೆ ಅಪ್ಪಳಿಸಿದ ದೊಡ್ಡ ಚಂಡಮಾರುತವು ಈ ಭಾಗದ 5 ಲಕ್ಷ ಜನರನ್ನು ಬಲಿ ಪಡೆಯಿತು
* 1971: ಸ್ವತಂತ್ರ ‘ಬಾಂಗ್ಲಾದೇಶ’ ಉದಯವನ್ನು ಅವಾಮಿ ಲೀಗ್ ಘೋಷಿಸಿತು. ಆದರೆ ಇದಕ್ಕೆ ಪಶ್ಚಿಮ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತು. ಆದರೆ ಭಾರತದ ಸೇನಾ ಸಹಕಾರದೊಂದಿಗೆ ನಡೆದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲಾಯಿತು. ಈ ಯುದ್ಧದಲ್ಲಿ ಭಾರತದ ಬಲಿಷ್ಠ ಸೇನಾ ಸಾಮರ್ಥ್ಯ ಅನಾವರಣಗೊಂಡಿತು
* 1972: ಶೇಕ್ ಮುಜೀಬರ್ ರೆಹಮಾನ್ ಅವರು ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಮುಖ ಉದ್ದಿಮೆಗಳನ್ನು ಅವರು ರಾಷ್ಟ್ರೀಕರಣ ಮಾಡಿದರು ಆದರೆ, 1975ರಲ್ಲಿ ನಡೆದ ಸೇನಾ ದಂಗೆಯಲ್ಲಿ ಅವರ ಹತ್ಯೆಯಾಯಿತು.

Sheikh Hasina narendra modi

ಹಸೀನಾ, ಪಾಕಿಸ್ತಾನ ಮತ್ತು ಭಾರತ

ಶೇಖ್‌ ಹಸೀನಾ ತನ್ನ ಅಧಿಕಾರ ಅವಧಿಯಲ್ಲಿ (1996-2001, 2009-2024) 1971ರ ಯುದ್ಧ ಅಪರಾಧ ಎಸಗಿದ ಕಾರಣಗಳಿಗಾಗಿ ರಜಾಕರ ವಿರುದ್ಧ ನಿರ್ದಯವಾಗಿ ಕ್ರಮ ಜರುಗಿಸಿದ್ದರು. 2010ರಲ್ಲಿ ಯುದ್ಧ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲು ಅಂತಾರಾಷ್ಟ್ರೀಯ ಅಪರಾಧ ಮಂಡಳಿಯನ್ನು ಸ್ಥಾಪಿಸಿದರು. ಅಂದು 344 ನಾಗರಿಕರನ್ನು ಕೊಂದಿದ್ದ ಹಾಗೂ ಇತರ ಯುದ್ಧಾಪರಾಧ ಕಾರಣಗಳಿಂದಾಗಿ 2013ರಲ್ಲಿ ಜಮಾತ್ ನಾಯಕ ಅಬ್ದುಲ್ ಕ್ವಾದರ್ ಮೊಲ್ಲಾಹ್‌ಗೆ ಮರಣದಂಡನೆ ವಿಧಿಸಲಾಯಿತು. ಇದಕ್ಕೆ ಪಾಕ್‌ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಪಾಕಿಸ್ತಾನದ ಸಂಸತ್ತು ಮೊಲ್ಲಾನ ಮರಣದಂಡನೆಯನ್ನು ಖಂಡಿಸುವ ನಿರ್ಣಯ ಅಂಗೀಕರಿಸಿತು. 1975ರಲ್ಲಿ ಶೇಖ್‌ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಗೀಡಾದ ನಂತರ ಅಂದಿನ ಭಾರತ ಸರ್ಕಾರ ಅವರಿಗೆ ನವದೆಹಲಿಯಲ್ಲಿ ಆಶ್ರಯ ನೀಡಿತ್ತು. ಆ ನಂತರ ಹಸೀನಾ ತನ್ನ ಅಧಿಕಾರದಲ್ಲಿ ಭಯೋತ್ಪಾದನೆ, ಧಾರ್ಮಿಕ ಉಗ್ರವಾದದ ಮೇಲೆ ಕಡಿವಾಣ ಹಾಕಿದರು. ಭಾರತದೊಂದಿಗೆ ನಿರಂತರವಾಗಿ ಆಪ್ತತೆಯಿಂದಿದ್ದರು.

INDIA PAKISTAN

ಭಾರತಕ್ಕೆ ಏನು ಆತಂಕ?

ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಾಸ್‌ ಬಾರ್ಡರ್‌ ಟೆರರಿಸಂ ನಡೆಸುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಡಿತ ಸಾಧಿಸಿ ಭಾರತದ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಿ, ಭಾರತದಲ್ಲಿ ಅಸ್ತಿರತೆ ಸೃಷ್ಟಿಸುವ ತಂತ್ರವನ್ನು ಹೆಣೆದಿದೆ. ಇತ್ತ ಅರುಣಾಚಲ ಪ್ರದೇಶ ನನ್ನದು ಎಂದು ಕುಳಿತಿರುವ ಚೀನಾ ಕೂಡ ಬಾಂಗ್ಲಾದೇಶದ ಮೂಲಕ ಈಶಾನ್ಯ ಭಾರತವನ್ನು ಕಬಳಿಸುವ ಷಡ್ಯಂತ್ರ ಹೆಣೆದಿದೆ. ಈ ನಡುವೆ ಪಾಕ್‌ ಮತ್ತು ಚೀನಾ ದ್ವಿಪಕ್ಷೀಯ ಸಂಬಂಧವು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.

2004ರಲ್ಲಿ ಚಿತ್ತಗಾಂಗ್‌ ತಲುಪಿದ್ದ ಸರಕು ಹಡಗೊಂದು 4.5 ರಿಂದ 7 ಶತಕೋಟಿ ಡಾಲರ್‌ನಷ್ಟು ಮೌಲ್ಯದ ಚೀನಾ ನಿರ್ಮಿತ ಮದ್ದು ಗುಂಡುಗಳನ್ನು 1,500 ಬಾಕ್ಸ್‌ಗಳಲ್ಲಿ ಹೊತ್ತು ತಂದಿತ್ತು. ಈ ಘಟನೆಯ ನಂತರ ಚಿತ್ತಗಾಂಗ್‌ ಮತ್ತು ಮೊಂಗ್ಲಾ ಬಂದರುಗಳನ್ನು ಸಂಪರ್ಕಿಸುವ ಮಾರ್ಗಗಳ ಬಗ್ಗೆ ಭಾರತೀಯ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಕಳೆದ ವರ್ಷವಷ್ಟೇ ಮೊಂಗ್ಲಾ ಬಂದರಿನಲ್ಲಿ ಟರ್ಮಿನಲ್‌ ಕಾರ್ಯಾಚರಣೆಯ ಹಕ್ಕುಗಳನ್ನು ಭಾರತ ಪಡೆದುಕೊಂಡಿತು. ಆದ್ರೆ ಈಗ ಪಾಕಿಸ್ತಾನಕ್ಕೆ ಚಿತ್ತಗಾಂಗ್‌ ಬಂದರಿಗೆ ನೇರ ಪ್ರವೇಶ ಹೊಂದುವ ಅವಕಾಶವಿದೆ. ಅಲ್ಲದೇ ಚಿತ್ತಗಾಂಗ್‌ ಬಂದರು ಮ್ಯಾನ್ಮಾರ್‌ಗೂ ಹತ್ತಿರವಿದೆ. ಇದರಿಂದ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಭದ್ರತಾ ಪಡೆಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

India wins terminal rights to strategic Mongla Port in Bangladesh over China Why is this important 1

ಕಳೆದ ವಾರ ಚಿತ್ತಾಗಾಂಗ್‌ ಬಂದರು ತಲುಪಿದ ‘ಎಂವಿ ಯುವಾನ್ ಕ್ಸಿಯಾನ್ ಫಾ ಝಾಂಗ್’ ಬಾಂಗ್ಲಾದೇಶದ ಪ್ರಮುಖ ಗಾರ್ಮೆಂಟ್ ಉದ್ಯಮಕ್ಕೆ ಕಚ್ಚಾ ವಸ್ತುಗಳು ಮತ್ತು ಮೂಲ ಆಹಾರ ಪದಾರ್ಥಗಳು ಸೇರಿದಂತೆ ಹಲವು ಪ್ರಮುಖ ವಸ್ತುಗಳನ್ನು ಪೂರೈಕೆ ಮಾಡಲಾಗಿದೆ. ಆದ್ರೆ ಕಚ್ಚಾ ವಸ್ತುಗಳಿಗೂ ಮುನ್ನ ಕೆಲವು 40 ಅಡಿ ಎತ್ತರದ ಕಂಟೈನರ್‌ಗಳನ್ನು ಹೊರ ತೆಗೆಯಲಾಗಿತ್ತು. ಈ ವೇಳೆ ಸುತ್ತಲೂ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಸರ್ಪಗಾವಲನ್ನೇ ರಚಿಸಲಾಗಿತ್ತು. ಇದರಲ್ಲಿ ನಿಶಿದ್ಧ ಶಸ್ತ್ರಾಸ್ತ್ರಗಳು ಪೂರೈಕೆಯಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಶೇಖ್‌ ಹಸೀನಾ ಅವರ ಆಪ್ತಮೂಲವೊಂದು ತಿಳಿಸಿರುವುದಾಗಿ ಟೆಲಿಗ್ರಾಫ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. s

ಅಲ್ಲದೇ ಶೇಖ್‌ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿ ಯುದ್ಧ ಸಾಮಗ್ರಿಗಳು ಎಲ್ಲೆಂದರಲ್ಲಿ ಸಿಗುತ್ತಿವೆ. ಈ ನಡುವೆ ಬಾಂಗ್ಲಾದೇಶವು ಪಾಕಿಸ್ತಾನದಿಂದ 40,000 ಮದ್ದುಗುಂಡುಗಳು, ಸ್ಫೋಟಕಗಳು ಮತ್ತು40 ಟನ್ ಆರ್‌ಡಿಎಕ್ಸ್ ಅನ್ನು ಒಳಗೊಂಡಿರುವ ಫಿರಂಗಿ ಮದ್ದುಗುಂಡುಗಳನ್ನು ಹೊಸದಾಗಿ ಪೂರೈಸಲು ಆದೇಶಿಸಿದೆ ಎಂಬ ವರದಿಗಳು ಎದೆ ಬಡಿತ ಹೆಚ್ಚಿಸಿದೆ. ಹೀಗಿರುವಾಗ ಢಾಕಾ ಮತ್ತು ಇಸ್ಲಾಮಾಬಾದ್ ನಡುವಿನ ವ್ಯಾಪಾರ ಅಭಿವೃದ್ಧಿಯು ಭಾರಿ ಕಳವಳಕ್ಕೆ ಕಾರಣವಾಗಿದೆ. ಇದು ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

Share This Article