ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

Public TV
2 Min Read
Karti Chidambaram

– ಇವಿಎಂ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ ಎಂದ ಸಂಸದ

ನವದೆಹಲಿ: ಇವಿಎಂ ಮ್ಯಾನಿಪ್ಯುಲೇಟ್‌ (EVM Manipulate) ಅಥವಾ ಟ್ಯಾಂಪರಿಂಗ್‌ ಆಗಿದೇ ಅನ್ನೋದನ್ನ ಸಾಬೀತುಪಡಿಸಲು ನನ್ನ ಬಳಿ ಯಾವುದೇ ಸಾಕ್ಷಿಗಳಿಲ್ಲ. ಹಾಗಾಗಿ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ಸಂಶಗಳೂ ಇಲ್ಲ ಎಂದು ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ (Karti Chidambaram) ಹೇಳಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ್‌ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸುವಾಗ ಇವಿಎಂ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್‌ ಸಂಸದರೂ ಆಗಿರುವ ಕಾರ್ತಿ ಚಿದಂಬರಂ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ

evm counting

ಇವಿಎಂ ಹ್ಯಾಕ್‌ ಆರೋಪದ ಕುರಿತು ದೆಹಲಿಯಲ್ಲಿ ಮಾತನಾಡಿದ ಕಾರ್ತಿ ಚಿದಂಬರಂ ಅವರು, ನಾನು 2004 ರಿಂದ ಇವಿಎಂಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ವೈಯಕ್ತಿಕವಾಗಿ ಯಾವುದೇ ಕೆಟ್ಟ ಅನುಭವವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ – ಪರಮೇಶ್ವರ್‌

ಇವಿಎಂ ಮ್ಯಾನಿಪ್ಯುಲೇಟ್‌ ಅಥವಾ ಟ್ಯಾಂಪರಿಂಗ್‌ ಆಗಿದೆ ಅನ್ನೋದನ್ನ ಸಾಬೀತುಪಡಿಸಲು ನನ್ನ ಬಳಿ ಯಾವುದೇ ಸಾಕ್ಷಿಗಳಿಲ್ಲ. ಹಾಗಾಗಿ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ಸಂಶಗಳಿಲ್ಲ. ಇವಿಎಂಗಳ ಬಗ್ಗೆ ಅಂತಹ ಸಂದೇಹವಿದ್ದರೆ, ಅದನ್ನ ಅವರೇ ಹೇಳಬೇಕು. ಏಕೆಂದರೆ ಇವಿಎಂನಿಂದಲೇ ಚುನಾವಣೆ ಗೆದ್ದಿದ್ದೇವೆ. ಇವಿಎಂನಿಂದಲೇ ಚುನಾವಣೆ ಸೋತಿದ್ದೇವೆ. ಇವಿಎಂ ಮ್ಯಾನಿಪ್ಯುಲೇಟ್‌ ಆಗಿದೆ ಅನ್ನೋದನ್ನ ವೈಜ್ಞಾನಿಕ ಡೇಟಾದೊಂದಿಗೆ ಸಾಬೀತುಪಡಿಸಿದ ಹೊರತು, ನನ್ನ ದೃಷ್ಟಿಕೋನವನ್ನು ನಾನು ಬದಲಾಯಿಸಿಕೊಳ್ಳಲು ಸಿದ್ಧನಿಲ್ಲ ಎಂದಿದ್ದಾರೆ.

ನಮ್ಮ ಪಕ್ಷದ ಅನೇಕರು ಇವಿಎಂ ಬಗ್ಗೆ ವಿಭಿನ್ನ ದೃಷ್ಟಿಕೋನ ಹೊಂದಿದ್ದಾರೆ ಅನ್ನೋದು ನನಗೆ ತಿಳಿದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂಡಮಾನ್‌ | ಬೋಟ್‌ನಲ್ಲಿ ಸಾಗಿಸ್ತಿದ್ದ 5 ಟನ್‌ ಮಾದಕ ವಸ್ತು ವಶಪಡಿಸಿಕೊಂಡ ಕೋಸ್ಟ್ ಗಾರ್ಡ್‌

ಪರಮೇಶ್ವರ್‌ ಹೇಳಿದ್ದೇನು?
ಇವಿಎಂ ಹ್ಯಾಕ್‌ನಿಂದಲೇ (EVM Hack) ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲೂ ನಾವು ಫೇಲ್ ಆಗಿದ್ದೇವೆ. ಮಹಾರಾಷ್ಟ್ರದಲ್ಲಿ (Maharashtra) ನಾವು ಅಗಾಡಿ ಸರ್ಕಾರ ಬರುತ್ತದೆ ಅಂದುಕೊಂಡಿದ್ದೆವು. ಆದರೆ ಎಲ್ಲವೂ ಉಲ್ಟಾ ಆಗಿದೆ. ಅಶೋಕ್ ಗೆಹ್ಲೋಟ್, ಭಗೇಲ್ ಸೇರಿ ಅನುಭವಿ ಸಿಎಂಗಳು ಚರ್ಚೆ ಮಾಡಿದ್ದೇವೆ. ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ದಾರೆ ಎಂದು ಚರ್ಚೆ ಆಗಿದೆ. ಆದ್ರೆ ಜಾರ್ಖಂಡ್‌ನಲ್ಲಿ ಯಾಕೆ ಹಾಗಾಗಲಿಲ್ಲ? ಬಿಜೆಪಿಯವರು ಪ್ಲ್ಯಾನ್ ಆಫ್ ಆಕ್ಷನ್ ತರಹ ಇದನ್ನು ಮಾಡ್ತಾರೆ. ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ. ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲಿ ಕೂಡ ನಾವು ಫೇಲ್ ಆಗಿದ್ದೇವೆ.

ಇವಿಎಂ ಇರುವ ತನಕ ಅವರೇ ಗೆಲ್ಲುತ್ತಾರೆ ಅನ್ನಿಸುತ್ತದೆ. ಬ್ಯಾಲೆಟ್ ಪೇಪರ್ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

Share This Article