ವಿಕ್ರಂಗೌಡ ಎನ್‍ಕೌಂಟರ್ ಯಾವುದೇ ಪ್ಲ್ಯಾನ್ ಮಾಡಿ ಮಾಡಿಲ್ಲ, ಇದು ಪರ್ಫೆಕ್ಟ್‌: ಡಿಜಿಪಿ

Public TV
2 Min Read
Pronab Mohanty

– ಎನ್‍ಕೌಂಟರ್ ಅಲ್ಲ, ಶರಣಾಗತಿ ನಮ್ಮ ಮೂಲ ಉದ್ದೇಶ
– ವಿಕ್ರಂ ಬಳಿ ಒಂದು ಬಾರಿ ಟ್ರಿಗರ್ ಮಾಡಿದ್ರೆ 50- 60 ಬುಲೆಟ್ ಸಿಡಿಯುವ ಗನ್!

ಉಡುಪಿ: ನಕ್ಸಲ್ ವಿಕ್ರಂಗೌಡ (Vikram Gowda) ಎನ್‍ಕೌಂಟರ್ (Encounter) ಬಗ್ಗೆ ಯಾವುದೇ ಅನುಮಾನ ಬೇಡ. ಎನ್‍ಕೌಂಟರ್‌ನ್ನು ಪ್ಲ್ಯಾನ್ ಮಾಡಿ ಮಾಡಿಲ್ಲ, ಇದು ಪರ್ಫೆಕ್ಟ್ ಎನ್‍ಕೌಂಟರ್ ಎಂದು ಕೂಂಬಿಂಗ್ ಆಪರೇಷನ್‍ನಲ್ಲಿ ಭಾಗಿಯಾಗಿದ್ದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ (Pronab Mohanty) ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಸೋಮವಾರ ಸಂಜೆ 6ಕ್ಕೆ ಗುಂಡಿನ ಚಕಮಕಿ ನಡೆದಿದೆ. ಕಾಡಿನ ಪ್ರದೇಶದಲ್ಲಿ ಎರಡು ಮೂರು ಮನೆ ಇತ್ತು. ಇಲ್ಲಿ ನಕ್ಸಲ್ ಹಾಗೂ ಪೊಲೀಸ್ ಮುಖಾಮುಖಿ ಆಗಿ ಎನ್‌ಕೌಂಟರ್ ಆಗಿದೆ. ಈ ಎನ್‌ಕೌಂಟರ್‌ನಲ್ಲಿ ಯಾವುದೇ ಸಂಶಯ ಬೇಡ. ಮನೆಗಳನ್ನು ಖಾಲಿ ಮಾಡೋದು ಕಳುಹಿಸೋದು ನಮ್ಮ ಕೆಲಸ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

vikram gowda encounter home

ಎನ್‍ಕೌಂಟರ್ ವೇಳೆ ಸಾಧಾರಣ ಕತ್ತಲಾಗಿರುವ ವಾತಾವರಣ ಆಗಿತ್ತು. ಎಷ್ಟು ಜನ ಇದ್ದರು ಎಂದು ಎಎನ್‍ಎಫ್‍ಗೆ ಮಾಹಿತಿ ಇಲ್ಲ. ಆತ ದಿನಸಿಗೆ ಬಂದಿದ್ದನೋ, ಯಾಕೆ ಬಂದಿದ್ದ ನಮಗೆ ಗೊತ್ತಿಲ್ಲ. ಎಷ್ಟು ಗುಂಡು ಬಿದ್ದಿವೆ ಎಂಬುದು ಗೊತ್ತಿಲ್ಲ, ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಇನ್ನೂ ಸಹ ಕಾಡು ಹಾಗೂ ಗ್ರಾಮದ ಸುತ್ತಮುತ್ತ ಕೂಂಬಿಂಗ್ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಎನ್‍ಕೌಂಟರ್ ಅಲ್ಲ, ಶರಣಾಗತಿ ನಮ್ಮ ಮೂಲ ಉದ್ದೇಶ. ಶರಣಾಗತಿಗೆ ನೂರಾರು ದಾರಿಗಳು ಇವೆ. ಶರಣಾಗತಿ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್ ಇವೆ ಬಳಸಿಕೊಳ್ಳಬಹುದು. ವಿಕ್ರಂಗೌಡ ಶರಣಾಗತಿಗೆ ಯಾವುದೇ ಪತ್ರ ವ್ಯವಹಾರ ಮಾಡಿರಲಿಲ್ಲ. ವಿಕ್ರಂಗೌಡ ಎಂಬ ಪ್ರಶ್ನೆಯಲ್ಲ, ಇದು ಫೇಕ್ ಎನ್‍ಕೌಂಟರ್ ಅಲ್ಲ. ನಮ್ಮ ಜೊತೆ ವಿಕ್ರಂಗೌಡನ ಇತ್ತೀಚಿನ ಫೋಟೋ ಇದೆ. ಎಎನ್‍ಎಫ್ ಬಳಿ ಎಲ್ಲಾ ದಾಖಲೆ ಇರುತ್ತವೆ. ಎಲ್ಲರ ಹೊಸ ದಾಖಲೆಗಳು ಇವೆ. ವಿಕ್ರಂ ಮೇಲೆ ಹಲವಾರು ಕೇಸುಗಳಿದ್ದವು. ಆತ ಮೋಸ್ಟ್ ವಾಂಟೆಡ್ ನಾಯಕನಾಗಿದ್ದ ಎಂದು ಅವರು ಹೇಳಿದ್ದಾರೆ.

ಬೇರೆ ಬೇರೆ ಕಡೆ ಕೂಂಬಿಂಗ್ ಮಾಡಿದ್ದೇವೆ. ನಮ್ಮ ತಂಡ ನಿರಂತರ ಕೂಂಬಿಂಗ್ ಆಪರೇಷನ್ ಮಾಡುತ್ತಲೇ ಇದೆ. ಜನ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ನಾವು ಜನರ ರಕ್ಷಣೆಗಾಗಿ ಇದ್ದೇವೆ. ನಕ್ಸಲ್ ಚಟುವಟಿಕೆ ಬಗ್ಗೆ ಯಾವುದೇ ಭಯ ಬೇಡ ಎಂದು ಅವರು ಭರವಸೆ ನೀಡಿದ್ದಾರೆ.

ವಿಕ್ರಂ ಬಳಿ ಮೂರು ಆಯುಧ ಇತ್ತು. ಗನ್ ಒಂದು ಬಾರಿ ಟ್ರಿಗರ್ ಮಾಡಿದ್ರೆ 50- 60 ಬುಲೆಟ್ ಸಿಡಿಯುವ ಗನ್ ಅದು. 3 ಎಂಎಂ ಪಿಸ್ತೂಲ್, ಚಾಕು ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಕೇರಳ ನಡುವೆ ನಕ್ಸಲ್ ಚಳುವಳಿ ಇದೆ. ನಕ್ಸಲ್ ಪ್ರತಿದಾಳಿ ಬಗ್ಗೆ ಅಲರ್ಟ್ ಆಗಿ ಇದ್ದೇವೆ. ಕೇರಳ ಜೊತೆ ಸಂಪರ್ಕ ಹಾಗೂ ಸಂಬಂಧ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.

Share This Article