56 ವರ್ಷಗಳ ಬಳಿಕ ಗಯಾನದಲ್ಲಿ ಭಾರತದ ಪ್ರಧಾನಿ – ಮೋದಿಗೆ ಭವ್ಯವಾದ ಸ್ವಾಗತ

Public TV
2 Min Read
Modi in Guyana

ಜಾರ್ಜ್‌ಟೌನ್‌: ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ (PM Narendra Modi) ಇಂದು (ನ.20) ಗಯಾನಾಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ 56 ವರ್ಷಗಳಲ್ಲಿ ಮೊದಲ ಭಾರತೀಯ ಪ್ರಧಾನಿಯಾಗಿ ಭೇಟಿ ನೀಡಿದ ಗೌರವಕ್ಕೆ ಪಾತ್ರರಾಗಿದ್ದಾರೆ.

Modi in guyana 1

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗಯಾನಾಗೆ (Guyana) ಆಗಮಿಸಿದ್ದು, 56 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ದಕ್ಷಿಣ ಅಮೆರಿಕಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.ಇದನ್ನೂ ಓದಿ: ವೈಭವದಿಂದ ನಡೆಯಿತು ಶ್ರೀ ಅಭಯ ಆಂಜನೇಯ ಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ

ಜಾರ್ಜ್‌ಟೌನ್‌ಗೆ (Georgetown) ಬಂದಿಳಿದ ಮೋದಿಯವರನ್ನು ಸ್ವಾಗತಿಸಲು ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ (Mohamed Irfaan Ali) ಮತ್ತು ಹನ್ನೆರಡು ಕ್ಯಾಬಿನೆಟ್ ಮಂತ್ರಿಗಳು ಆತ್ಮೀಯತೆಯಿಂದ ಬರಮಾಡಿಕೊಂಡರು.

ಪ್ರಧಾನಿ ಮೋದಿಯವರು ಇಂದು ಅಧ್ಯಕ್ಷ ಮೊಹಮದ್ ಇರ್ಫಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದು, ದಕ್ಷಿಣ ಅಮೆರಿಕಾದ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕೆರಿಬಿಯನ್ ಸಮುದಾಯದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ ಕೈಗೊಂಡ ಈ ಭೇಟಿಯು ಭಾರತ ಮತ್ತು ಗಯಾನಾ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.

Modi in Guyana 2

ಪ್ರಧಾನಿ ಮೋದಿಯವರಿಗೆ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ `ದಿ ಆರ್ಡರ್ ಆಫ್ ಎಕ್ಸಲೆನ್ಸ್’ ಅನ್ನು ನೀಡಲಿದೆ. ಜೊತೆಗೆ ಬಾರ್ಬಡೋಸ್ ತನ್ನ ಪ್ರತಿಷ್ಠಿತ `ಆರ್ಡರ್ ಆಫ್ ಫ್ರೀಡಮ್ ಆಫ್ ಬಾರ್ಬಡೋಸ್’ ಅನ್ನು ನೀಡಲಿದೆ. ಈ ಮೂಲಕ ಪ್ರಧಾನಿ ಮೋದಿ ಒಟ್ಟು 19 ಅಂತರಾಷ್ಟ್ರೀಯ ಗೌರವಗಳನ್ನು ಸ್ವೀಕರಿಸಿದಂತಾಗುತ್ತದೆ.ಇದನ್ನೂ ಓದಿ: ವಿಕ್ರಂ ಗೌಡ ಎನ್‌ಕೌಂಟರ್‌| ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ: ಪರಮೇಶ್ವರ್‌

Share This Article