ಆಪ್‌ಗೆ ರಾಜೀನಾಮೆ ನೀಡಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಗೆ ಸೇರ್ಪಡೆ

Public TV
2 Min Read
Kailash Gahlot Former Delhi Minister Who Quit AAP Joins BJP

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಹತ್ವದ ಬೆಳವಣಿಗೆ ನಡೆದಿದಿದ್ದು ಆಮ್‌ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೈಲಾಶ್ ಗಹ್ಲೋಟ್ (Kailash Gahlot) ಬಿಜೆಪಿ ಸೇರಿದ್ದಾರೆ.

ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಜಯ್ ಪಾಂಡಾ, ದುಷ್ಯಂತ್ ಗೌತಮ್, ಹರ್ಷ್ ಮಲ್ಹೋತ್ರಾ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು. ಸೇರ್ಪಡೆ ಬಳಿಕ ಮಾತನಾಡಿದ ಅವರು, ಎಎಪಿಯ ಹೇಳಿಕೆಯನ್ನು ತಳ್ಳಿಹಾಕಿದ ಗಹ್ಲೋಟ್ ಅವರು ಒತ್ತಡದ ಅಡಿಯಲ್ಲಿ ತೊರೆದರು, ತಮ್ಮ ನಿರ್ಧಾರ ರಾತ್ರೋರಾತ್ರಿ ಮಾಡಿದಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷವು ಅದರ ಮೂಲ ಮೌಲ್ಯಗಳು ಮತ್ತು ನೈತಿಕತೆಯಿಂದ ದೂರ ಸರಿದಿದೆ ಹೀಗಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದರು.

ಯಾವುದೇ ಬಾಹ್ಯ ಒತ್ತಡದಿಂದ ನಾನು ಬಿಜೆಪಿಗೆ ಸೇರಲಿಲ್ಲ, ಎಎಪಿ ತನ್ನ ಸಿದ್ಧಾಂತವನ್ನು ರಾಜಿ ಮಾಡಿಕೊಂಡಿದ್ದರಿಂದ ನಾನು ರಾಜೀನಾಮೆ ನೀಡಬೇಕಾಯಿತು‌. ನಾನು ಆರಂಭದಲ್ಲಿ ಸಾಮಾನ್ಯ ಜನರಿಗೆ ಸೇವೆ ಸಲ್ಲಿಸಲು ಎಎಪಿಗೆ ಸೇರಿದೆ, ಆದರೆ ಈಗ, ಪಕ್ಷವು ಅದರ ಮೂಲ ಧ್ಯೇಯದಿಂದ ಸಂಪರ್ಕ ಕಡಿತಗೊಂಡಿದೆ, ಅದರ ನಾಯಕರು ‘ಆಮ್’ (ಸಾಮಾನ್ಯ) ನಿಂದ ‘ಖಾಸ್’ (ಗಣ್ಯರು) ಗೆ ಬದಲಾಗುತ್ತಿದ್ದಾರೆ, ”ಎಂದು ಹೇಳಿದರು.

ಭಾನುವಾರ ದೆಹಲಿಯ (Delhi) ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಆಮ್ ಆದ್ಮಿ ಪಕ್ಷಕ್ಕೆ (AAP) ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರದಲ್ಲಿ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

Kailash Gahlot

ಸಾರಿಗೆ ಆಡಳಿತ ಸುಧಾರಣೆ, ಐಟಿ, ಗೃಹ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗಳನ್ನು ಹೊಂದಿದ್ದ ಕೈಲಾಶ್ ಗಹ್ಲೋಟ್ ಅವರು ತಮ್ಮ ರಾಜೀನಾಮೆಯನ್ನು ದೆಹಲಿಯ ಸರ್ಕಾರದ ಮಂತ್ರಿ ಮಂಡಳಿಗೆ ಸಲ್ಲಿಸಿದ್ದರು.

ದೆಹಲಿಯ ಜನರಿಗೆ ನೀಡಿದ ಪ್ರಮುಖ ಭರವಸೆಗಳನ್ನು ಈಡೇರಿಸಲು ಪಕ್ಷದ ಅಸಮರ್ಥತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಮುನಾ ನದಿಯನ್ನು ಶುಚಿಗೊಳಿಸುವಲ್ಲಿ ವಿಫಲವಾಗಿದೆ.  ಅರವಿಂದ್ ಕೇಜ್ರಿವಾಲ್ ಅವರ ಹೊಸ ಅಧಿಕೃತ ಬಂಗಲೆಯ ಶೀಶ್‌ ಮಹಲ್‌ ವಿಚಾರದಲ್ಲಿ ಹಲವಾರು ಮುಜುಗರದ ಅಂಶಗಳಿವೆ. ಇದು ಸಾಮಾನ್ಯ ಜನರ ಪಕ್ಷವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಏನು ಉತ್ತರಿಸುವುದು ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.

ಕೈಲಾಶ್ ಗೆಹ್ಲೋಟ್ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ ಆಪ್ ರಾಷ್ಟ್ರೀಯ ಸಂಚಾಲು ಅರವಿಂದ್ ಕೇಜ್ರಿವಾಲ್ ಅವರು, ಗಹ್ಲೋಟ್ ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು, ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು.

 

Share This Article