ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ

Public TV
1 Min Read
t thimmaiah

ಸ್ಯಾಂಡಲ್‌ವುಡ್‌ನ ಹಿರಿಯ ನಟ ಟಿ.ತಿಮ್ಮಯ್ಯ (T.Thimmaiah) ಅವರು ಇಂದು (ನ.16) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ನ.17ರ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಟಿ.ತಿಮ್ಮಯ್ಯ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.

t thimmaiah 1

ಮೇರು ನಟರಾದ ಡಾ.ರಾಜ್‌ಕುಮಾರ್, ಡಾ. ವಿಷ್ಣುವರ್ಧನ್‌, ಅನಂತ್ ನಾಗ್. ಹೆಸರಾಂತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಕೆ.ವಿ ಜಯರಾಮ್ ಮತ್ತು ಅನೇಕರೊಂದಿಗೆ ಅವರು ಕೆಲಸ ಮಾಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್‌ಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶ್ರೀಲೀಲಾ

ಚಲಿಸುವ ಮೋಡಗಳು, ಪ್ರತಿಧ್ವನಿ, ಬಂಧನ, ಬೆಂಕಿಯ ಬಲೆ, ಕಾಮನ ಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ, ಈ ಜೀವ ನಿನಗಾಗಿ, ಕುರುಕ್ಷೇತ್ರ, ಬೆಳದಿಂಗಳ ಬಾಲೆ
ಚಿತ್ರಗಳಲ್ಲಿ ನಟಿಸಿದ್ದರು.

Share This Article