ಪ್ರಥಮ್‌ ಜೊತೆ ದರ್ಶನ್‌ ಫ್ಯಾನ್ಸ್‌ ಕಿರಿಕ್‌ – ಅಷ್ಟಕ್ಕೂ ಆಗಿದ್ದೇನು?

Public TV
1 Min Read
pratham

‘ಬಿಗ್ ಬಾಸ್ ಕನ್ನಡ 4’ರ (Bigg Boss Kannada 4) ವಿನ್ನರ್ ಪ್ರಥಮ್ (Pratham) ಜೊತೆ ದರ್ಶನ್ ಫ್ಯಾನ್ಸ್ (Darshan) ಕಿರಿಕ್ ಮಾಡಿಕೊಂಡಿದ್ದಾರೆ. ಪ್ರಥಮ್‌ಗೆ ಅಶ್ಲೀಲ ಬಳಸಿ ನಿಂದಿಸಿದಲ್ಲದೇ ಜೈ ಡಿಬಾಸ್ ಎಂದು ಕೂಗಿ ಅಂತ ಒತ್ತಾಯಿಸಿದ್ದಾರೆ. ದರ್ಶನ್ ಅಭಿಮಾನಿಗಳ (Fans) ಕಿರಿಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಟ ಹಂಚಿಕೊಂಡಿದ್ದಾರೆ.

Pratham Manya Singh 1

ಹೋಟೆಲ್‌ವೊಂದಕ್ಕೆ ಪ್ರಥಮ್ ತೆರಳಿದ ಸಂದರ್ಭದಲ್ಲಿ ಏಕಾಎಕಿ ಬಂದು ಜೈ ಡಿಬಾಸ್ ಅಂತ ಕೂಗಿ ಅಂತ ಫ್ಯಾನ್ಸ್ ಗಲಾಟೆ ಮಾಡಿದರು. ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಫ್ಯಾನ್ಸ್ ಯತ್ನಿಸಿದರು. ಆ ನಂತರ ಹೋಟೆಲ್‌ನ 8 ಜನ ಬೌನ್ಸರ್ ಆ ಗೂಂಡಾಗಳನ್ನು ಹೊರಗೆ ತಳ್ಳಿದ್ದರು ಎಂದು ಘಟನೆಯ ಬಗ್ಗೆ ಪ್ರಥಮ್ ವಿವರಿಸಿದ್ದಾರೆ.

ಆ ನಂತರ ಹೋಟೆಲ್ ಸಿಬ್ಬಂದಿ ಮತ್ತು ಮ್ಯಾನೇಜರ್ ಮನವಿಯ ಮೇರೆಗೆ ನಾನು ದೂರು ಕೊಡಬಾರದು ಎಂದು ನಿರ್ಧರಿಸಿದೆ. ನಮ್ಮ ಪಾಡಿಗೆ ನಾವಿದ್ದೇವೆ. ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವರ ಪಾಡಿಗೆ ಇದ್ದಾರೆ. ಈ ಮಿನಿ ಗೂಂಡಾಗಳ ನಿಗರಾಟ ನೋಡೋಕೆ ಆಗುತ್ತಿಲ್ಲ. ಈ ಘಟನೆ ಎಲ್ಲವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎಂದು ಎಕ್ಸ್‌ನಲ್ಲಿ ನಟ ತಿಳಿಸಿದ್ದಾರೆ.

Share This Article