ಕಿರುತೆರೆಯ ಅತೀ ದೊಡ್ಡ ಶೋ ‘ಬಿಗ್ ಬಾಸ್ ಸೀಸನ್ 11’ (Bigg Boss Kannada 11) ಇದೀಗ 8ನೇ ವಾರಕ್ಕೆ ಕಾಲಿಡುವ ಹೊಸ್ತಿಲಲ್ಲಿದೆ. ಹೀಗಿರುವಾಗ ದೊಡ್ಮನೆಯಲ್ಲಿ ರಂಪಾಟ ನಡೆದಿದೆ. ವಾಹಿನಿಯು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋವೊಂದನ್ನು ಶೇರ್ ಮಾಡಿಕೊಂಡಿದೆ. ಮೋಕ್ಷಿತಾಗೆ (Mokshitha Pai) ಅಹಂಕಾರ ಇದೆ ಎಂದು ಧನರಾಜ್ ತಿವಿದಿದ್ದಾರೆ. ಇದನ್ನೂ ಓದಿ:ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್
ಹೊಸ ಪ್ರೋಮೋದಲ್ಲಿ ಎಂದಿನಂತೆ ವಾರಾಂತ್ಯದಲ್ಲಿ ಈ ವಾರದ ಕಳಪೆ ಪ್ರದರ್ಶನ ಪ್ರಕ್ರಿಯೆ ನಡೆದಿದೆ. ಮನೆಯ ಸದಸ್ಯರು ಒಬ್ಬಬ್ಬರಾಗಿ ಬಂದು ಈ ವಾರದ ಕಳಪೆ ಪ್ರದರ್ಶನ ನೀಡಿದ್ದು, ಯಾರು ಅಂತ ಹೇಳಬೇಕು. ಆದರೆ ಈ ವಾರದ ಜೋಡಿ ಟಾಸ್ಕ್‌ನಲ್ಲಿ ತಮ್ಮ ಜೊತೆಯಾಗಿದ್ದ ಧನರಾಜ್ ಅವರನ್ನೇ ಮೋಕ್ಷಿತಾ ಕಳಪೆ ಎಂದಿದ್ದಾರೆ. ಇದು ಧನರಾಜ್ (Dhanraj Achar) ಕೋಪಕ್ಕೆ ಕಾರಣವಾಗಿದೆ.
ಈ ವಾರದ ಕಳಪೆ ಪಟ್ಟವನ್ನು ಧನರಾಜ್‌ಗೆ ಮನೆಯ ಇತರೆ ನೀಡಿದ್ದಾರೆ. ಇದರ ಪೈಕಿ ಮೋಕ್ಷಿತಾ ಅವರು, ಟಾಸ್ಕ್ ವಿಚಾರ ಅಂತ ಬಂದಾಗ ಸ್ಮಾರ್ಟ್ ಆಗಿ ನೀವು ಯೋಚನೆ ಮಾಡ್ತಾ ಇರಲಿಲ್ಲ. ಜೋಡಿಯಾಗಿದ್ದಕ್ಕೆ ನೀವು ಎಷ್ಟು ಸಪೋರ್ಟಿವ್ ಆಗಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಆಗ ಧನರಾಜ್ ಅಹಂಕಾರ ಇದೆ ನಿಮಗೆ ಅಂತ ಹೇಳಿ ಆ ಕಳಪೆ ಪಟ್ಟವನ್ನು ಮೋಕ್ಷಿತಾ ಅವರಿಗೆ ಕಟ್ಟಿದ್ದಾರೆ. ಮೋಕ್ಷಿತಾ ಅಹಂಕಾರಿ ಎಂದು ಧನರಾಜ್ ತಿವಿದಿದ್ದಾರೆ. ಮೋಕ್ಷಿತಾಗೆ ಇನ್ಮೇಲೆ ಅಸಲಿ ಆಟ ತೋರಿಸುತ್ತೇನೆ ಎಂದು ಧನರಾಜ್ ಸವಾಲು ಹಾಕುತ್ತಾ ಬಿಗ್ ಬಾಸ್‌ನಲ್ಲಿರುವ ಜೈಲಿಗೆ ಹೋಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಳಿವು ಮತ್ತು ಉಳಿವಿಗಾಗಿ ಇಬ್ಬರ ನಡುವಿನ ಫ್ರೆಂಡ್‌ಶಿಪ್ ಕಟ್ ಆಯ್ತಾ? ಎಂಬು ಅನುಮಾನ ನೋಡುಗರಲ್ಲಿ ಮೂಡಿದೆ.