Waqf Land Row | ವಿವಾದಿತ ಜಮೀನಿನಲ್ಲಿ ಉಳುಮೆ – ರೈತರ ಮೇಲೆ ಕೇಸ್ ದಾಖಲು, ಟ್ರ್ಯಾಕ್ಟರ್ ಜಪ್ತಿ

Public TV
1 Min Read
Chikkaballapura 3 1

ಚಿಕ್ಕಬಳ್ಳಾಪುರ: ವಿವಾದಿತ ವಕ್ಫ್‌ ಆಸ್ತಿಯಲ್ಲಿ (Waqf Property) ಉಳುಮೆ ಮಾಡಲು ಮುಂದಾದ ರೈತರ ಮೇಲೆಯೇ ಪೋಲಿಸರು ಪ್ರಕರಣ ದಾಖಲಿಸಿ ಟ್ರ್ಯಾಕ್ಟರ್‌ ವಶಪಡಿಸಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

Chikkaballapura 4 1

ಅಂದಹಾಗೆ ತಿಮ್ಮಸಂದ್ರ ಗ್ರಾಮದ ಸರ್ವೆ ನಂಬರ್ 13-1 ರಲ್ಲಿ 2 ಎಕೆರೆ 21 ಗುಂಟೆ, 13-3 ರಲ್ಲಿ 20 ಗುಂಟೆ, ಸರ್ವೆ ನಂಬರ್ 20 ರಲ್ಲಿ 1 ಎಕೆರೆ 36 ಗುಂಟೆ ಜಮೀನನ್ನ ಹತ್ತಕ್ಕೂ ಹೆಚ್ಚು ಮಂದಿ ರೈತರು (Farmers) ಉಳುಮೆ ಮಾಡುತ್ತಿದ್ದರು ಎನ್ನಲಾಗಿದ್ದು ಈ ಜಮೀನುಗಳನ್ನ 2018-19 ರಲ್ಲಿ ವಕ್ಫ್‌ ಆಸ್ತಿಯಾಗಿ ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: ವಕ್ಫ್ ಹೋರಾಟದ ವಿಚಾರದಲ್ಲಿ ರಾಜ್ಯಾಧ್ಯಕ್ಷರ ನಿರ್ಧಾರವೇ ಅಂತಿಮ: ಯತ್ನಾಳ್ ಟೀಂಗೆ ರೇಣುಕಾಚಾರ್ಯ ತಿರುಗೇಟು

Chikkaballapura 2 1

ಈ ಜಾಗಕ್ಕೆ ವಕ್ಫ್‌ ಆಸ್ತಿಯಂತ ಕಾಂಪೌಂಡ್ ಹಾಕಿಕೊಳ್ಳಲಾಗಿದೆ. ಆದ್ರೆ ಈಗ ವಿವಾದಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರೈತರು ಈ ಜಮೀನು ನಮ್ಮದು ಅಂತ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲು ಮುಂದಾಗಿದ್ದಾರೆ. ಇದ್ರಿಂದ ಚಿಂತಾಮಣಿ ಜಾಮೀಯಾ ಮಸೀದಿ ಟ್ರಸ್ಟ್ ನವರು ಹಾಗೂ ರೈತರ ನಡುವೆ ವಾಗ್ವಾದ ನಡೆದು ಗಲಾಟೆಯಾಗಿದೆ. ಇದನ್ನೂ ಓದಿ: ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

ವಿಷಯ ತಿಳಿದು ಚಿಂತಾಮಣಿ ಗ್ರಾಮಾಂತರವ ಪೊಲೀಸರು ಎರಡು ಕಡೆಯವರನ್ನ ಸಮಾಧಾನಪಡಿಸಿ ಠಾಣೆಗೆ ಕೆರೆಸಿ ಶಾಂತಿ ಸಭೆ ನಡೆಸಿದ್ದಾರೆ. ನಂತರ ಜಾಮೀಯಾ ಮಸೀದಿ ಟ್ರಸ್ಟ್‌ನ ಕಾರ್ಯದರ್ಶಿ ಇನಾಯತ್ ಉಲ್ಲಾ ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಅತಿಕ್ರಮ ಪ್ರವೇಶ ಪ್ರಕರಣ ದಾಖಲಿಸಿ 10ಕ್ಕೂ ಹೆಚ್ಚು ಮಂದಿ ರೈತರ ಮೇಲೆ ಬಿಎನ್‍ಎಸ್ 324(4) ಹಾಘೂ 329(3) ಅಡಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಉಳುಮೆ ಮಾಡಲು ತಂದಿದ್ದ ಟ್ರ್ಯಾಕ್ಟರ್‌ ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್: ರೇಣುಕಾಚಾರ್ಯ ವಾಗ್ದಾಳಿ

Share This Article