ಕನ್ನಡದ ‘ಬಿಗ್ ಬಾಸ್ ಸೀಸನ್ 11’ಕ್ಕೆ ‘ರಾಮಾಚಾರಿ’ (Ramachari) ಸೀರಿಯಲ್ ಖ್ಯಾತಿಯ ಜೋಡಿ ಮೌನ ಗುಡ್ಡೆಮನೆ (Mouna Guddemane) ಮತ್ತು ರಿತ್ವಿಕ್ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ‘ಬಿಗ್ ಬಾಸ್’ನಲ್ಲಿ ಮನರಂಜನೆ ದುಪ್ಪಟ್ಟಾಗಿದೆ. ರಾಮಾಚಾರಿ ಸೀರಿಯಲ್ ಜೋಡಿಯ ಮುಂದೆ ‘ರಾ ರಾ ರಕ್ಕಮ್ಮ’ ಹಾಡಿಗೆ ಐಶ್ವರ್ಯಾ (Aishwarya Shindogi) ಮತ್ತು ಧರ್ಮ ಹೆಜ್ಜೆ ಹಾಕಿದ್ದಾರೆ.
ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ನಲ್ಲಿ ಹನುಮಂತನ ಎಂಟ್ರಿ ಆದ್ಮೇಲೆ ಕಾರ್ಯಕ್ರಮ ಮತ್ತಷ್ಟು ರಂಗೇರಿದೆ. ಇಂದಿನ ಸಂಚಿಕೆಯಲ್ಲಿ ಜನಪ್ರಿಯ ರಾಮಾಚಾರಿ ಮತ್ತು ಚಾರು ಜೋಡಿ ದೊಡ್ಮನೆಗೆ ಆಗಮಿಸಿದ್ದಾರೆ. ಇವರನ್ನು ಇಂಪ್ರೆಸ್ ಮಾಡೋದೆ ಸ್ಪರ್ಧಿಗಳು ಟಾಸ್ಕ್ ಆಗಿದೆ. ಇದನ್ನೂ ಓದಿ:ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಹಾಲಿವುಡ್ ನಟಿ
ಅದರಂತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಭರ್ಜರಿಯಾಗಿ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ ಸಿಂಧೋಗಿ ಹೆಜ್ಜೆ ಹಾಕಿದ್ದಾರೆ. ಇವರಿಗೆ ಶಿಶಿರ್ ಕೂಡ ಸಾಥ್ ನೀಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿನ ಸುದೀಪ್ ಸ್ಟೈಲ್ ಅನ್ನೇ ಧರ್ಮ (Dharma Kirthiraj) ಅನುಕರಣೆ ಮಾಡಿದ್ದಾರೆ. ಜೀನ್ಸ್ ಪ್ಯಾಂಟ್‌ಗೆ ರವಿಕೆ ಮತ್ತು ಕೆಂಪು ಶಾಲ್ ಹಾಕಿ ಐಶ್ವರ್ಯಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.
View this post on Instagram
ಧರ್ಮ ಮತ್ತು ಐಶ್ವರ್ಯಾ ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ಡ್ಯಾನ್ಸ್‌ಗೆ ‘ರಾಮಾಚಾರಿ’ ಸೀರಿಯಲ್ ಜೋಡಿ ಇಂಪ್ರೆಸ್ ಆದ್ರಾ? ಕಾದುನೋಡಬೇಕಿದೆ. ಇಂದಿನ ಎಪಿಸೋಡ್ ರಾತ್ರಿ 9:30ಕ್ಕೆ ಉತ್ತರ ಸಿಗಲಿದೆ. ಒಟ್ನಲ್ಲಿ ಇಂದಿನ ಸಂಚಿಕೆ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.