‘ಬಿಗ್ ಬಾಸ್ ಕನ್ನಡ 8’ರ ವಿನ್ನರ್ ಮಂಜು ಪಾವಗಡ (Manju Pavagada) ಅವರು ಹುಟ್ಟುರಾದ ಪಾವಗಡದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ನಂದಿನಿ (Nandini) ಎಂಬುವವರ ಜೊತೆ ಮಂಜು ಪಾವಗಡ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.
ಪಾವಗಡದಲ್ಲಿ ನ.13ರಂದು ನಂದಿನಿ- ಮಂಜು ಅವರ ಆರತಕ್ಷತೆ ಕಾರ್ಯಕ್ರಮ ಜರುಗಿತು. ಇಂದು (ನ.14) ಅದ್ಧೂರಿಯಾಗಿ ನಟ ಮದುವೆಯಾಗಿದ್ದಾರೆ. ಈ ಸಂಭ್ರಮದಲ್ಲಿ ಶುಭ ಪೂಂಜಾ, ಮಾನಸಾ, ರಾಘವೇಂದ್ರ, ಜಗ್ಗಪ್ಪ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಭಾಗಿಯಾಗಿ ಶುಭಕೋರಿದ್ದಾರೆ.
View this post on Instagram
ಇನ್ನೂ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಿದ್ದರು. ಬಳಿಕ ‘ಅಂತರಪಟ’ ಎಂಬ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ್ದರು. ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ.