ಜಿ20 ಶೃಂಗಸಭೆಗೂ ಮುನ್ನ ಬ್ರೆಜಿಲ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – ಹೆಚ್ಚಿದ ಆತಂಕ

Public TV
1 Min Read
Brazil

– ಸುಪ್ರೀಂ ಕೋರ್ಟ್‌ ಹೊರಗೆ ತನ್ನನ್ನು ತಾನು ಸ್ಫೋಟಿಸಿಕೊಂಡ ವ್ಯಕ್ತಿ

ಬ್ರಿಜಿಲಿಯಾ: ಸುಪ್ರೀಂ ಕೋರ್ಟ್‌ನ ಹೊರಗೆ ವ್ಯಕ್ತಿಯೊಬ್ಬ ಆತ್ಮಹುತಿ ಬಾಂಬ್‌ ದಾಳಿ ನಡೆಸಿರುವ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.

ಕೋರ್ಟ್‌ ಪ್ರವೇಶಿಸಲು ಪ್ರಯತ್ನಿಸುವಾಗ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಜಿ20 ಸಭೆಗೆ ಅಂತಿಮ ತಯಾರಿ ನಡೆಸುತ್ತಿರುವ ಹೊತ್ತಿನಲ್ಲೇ ಸ್ಫೋಟ ಸಂಭವಿಸಿರುವುದು ಭದ್ರತಾ ಆತಂಕವನ್ನು ಉಂಟು ಮಾಡಿದೆ.

ನ್ಯಾಯಾಲಯದ ಕಟ್ಟಡದ ಸಮೀಪವಿರುವ ಪಾರ್ಕಿಂಗ್ ಸ್ಥಳದಲ್ಲಿ ಮೊದಲ ಸ್ಫೋಟ ಸಂಭವಿಸಿತು. ಬಳಿಕ ಕೋರ್ಟ್ ಮುಂಭಾಗದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ. ಸ್ಫೋಟದ ಪಳೆಯುಳಿಕೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಕೋರ್ಟ್ ಕಟ್ಟಡಕ್ಕೆ ಹಾನಿ ಮಾಡಲು ಸ್ಫೋಟ ನಡೆಸಿದ ಶಂಕಿತರು ಪ್ರಯತ್ನಿಸಿದ್ದರು. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ.

ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಸೇರಿ ಇಪ್ಪತ್ತು ದೇಶದ ನಾಯಕರು ಭಾಗಿಯಾಗಲಿದ್ದಾರೆ. ಅದಕ್ಕೂ ಮುನ್ನ ನಡೆದಿರುವ ಈ ಸ್ಫೋಟ ಆತಂಕವನ್ನು ಹೆಚ್ಚಿಸಿದೆ.

Share This Article