ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ಯುವಕರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಸಾಗರ (Sagara) ತಾಲೂಕಿನ ಕಳಸವಳ್ಳಿ ಬಳಿ ನಡೆದಿದೆ.
ನಾಪತ್ತೆಯಾದ ಯುವಕರನ್ನು ಸಿಗಂದೂರಿನ ಚೇತನ್ ಜೈನ್(28), ಹುಲಿದೇವರಬನದ ಸಂದೀಪ್(30) ಹಾಗೂ ಗಿನಿವಾರದ ರಾಜು (28) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಾಜ್ಯದ ಜನತೆಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ – ವೈಷ್ಣೋದೇವಿಗೆ ತೆರಳುವ ಭಕ್ತರಿಗೆ 5,000 ಸಹಾಯಧನ
ಬುಧವಾರ ಮಧ್ಯಾಹ್ನ ಹೊಳೆ ಊಟಕ್ಕೆ ಕಳಸವಳ್ಳಿ ಬಳಿಯ ಶರಾವತಿ (Sharavati River) ಹಿನ್ನೀರಿನಲ್ಲಿ ತೆಪ್ಪದಲ್ಲಿ ಐವರು ಯುವಕರು ತೆರಳಿದ್ದರು. ತೆಪ್ಪ ಸಮತೋಲನ ಕಳೆದುಕೊಂಡು ಮುಳುಗಿ ಬಿದ್ದಿದೆ. ಈಜು ಬರುತ್ತಿದ್ದ ವಿನಯ್ ಮತ್ತು ಯಶವಂತ್ ಎಂಬುವರು ಈಜಿ ದಡವನ್ನು ಸೇರಿದ್ದಾರೆ. ಇದನ್ನೂ ಓದಿ: ಮೈಕೆಲ್ ಕುನ್ಹಾ 7,223 ಕೋಟಿ ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ: ಹೆಚ್.ಕೆ ಪಾಟೀಲ್
ಈ ದುರಂತದಲ್ಲಿ ಈಜು ಬಾರದೇ ಇದ್ದ ರಾಜು, ಚೇತನ್, ಸಂದೀಪ್ ನೀರಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ತೆರಳಿದ್ದು, ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಸಾವನ್ನಪ್ಪಿದ ಮೂವರು ಯುವಕರ ಮೃತದೇಹ ಪತ್ತೆಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: 3 ಕ್ಷೇತ್ರದಲ್ಲಿ ಶಾಂತಿಯುತ ಮತದಾನ – ಚನ್ನಪಟ್ಟಣದಲ್ಲಿ 89% ದಾಖಲೆಯ ವೋಟಿಂಗ್