‘ಪುಷ್ಪ 2’ ಬಳಿಕ ರಿಲೀಸ್ ಆಗಲಿದೆ ರಶ್ಮಿಕಾ ನಟನೆಯ ಬ್ಯಾಕ್ ಟು ಬ್ಯಾಕ್ ಚಿತ್ರಗಳು

Public TV
1 Min Read
rashmika mandanna

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಬೇಡಿಕೆಯ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ‘ಪುಷ್ಪ 2’ (Pushpa 2) ರಿಲೀಸ್ ಬಳಿಕ ಮುಂದಿನ 10 ತಿಂಗಳಲ್ಲಿ ರಶ್ಮಿಕಾ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿದೆ. ಇದನ್ನೂ ಓದಿ:BBK 11: ಹನುಮಂತನ ಬಟ್ಟೆ ಧರಿಸಿ ಕ್ವಾಟ್ಲೆ ಕೊಟ್ಟ ಗೌತಮಿ

rashmika mandanna

ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 8 ವರ್ಷಗಳಾಗಿವೆ. ಕನ್ನಡದ ‘ಕಿರಿಕ್ ಪಾರ್ಟಿ’ಯಿಂದ (Kirik Party) ಶುರುವಾದ ಅವರ ವೃತ್ತಿ ಜೀವನ ಇಂದು ಬಾಲಿವುಡ್ ಅಂಗಳಲ್ಲಿ ಕೊಡಗಿನ ಬೆಡಗಿ ಸದ್ದು ಮಾಡುತ್ತಿದ್ದಾರೆ. ಕಳೆದ ವರ್ಷ ಅನಿಮಲ್ ಸಿನಿಮಾ ಮೂಲಕ ಭರ್ಜರಿ ಸಕ್ಸಸ್ ಕಂಡರು. ಆ ನಂತರ ಅವರ ನಟನೆಯ ಯಾವುದೇ ಚಿತ್ರ ರಿಲೀಸ್ ಆಗಿರಲಿಲ್ಲ. ಇದೀಗ ಅವರ ಮುಂಬರುವ ಸಿನಿಮಾಗಳ ಮಾಹಿತಿ ಇಲ್ಲಿದೆ.

rashmika mandanna 1

ಈ ವರ್ಷದ ಅಂತ್ಯದಲ್ಲಿ ಡಿಸೆಂಬರ್ 5ರಂದು ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಆ ನಂತರ ಡಿ.6ರಂದು ವಿಕ್ಕಿ ಕೌಶಲ್ ಜೊತೆಗಿನ ‘ಛಾವಾ’ ತೆರೆಕಾಣಲಿದೆ. ಬಳಿಕ 2025ರ ಈದ್ ಹಬ್ಬದ ವೇಳೆ, ಸಲ್ಮಾನ್ ಖಾನ್ ಜೊತೆಗಿನ ಸಿಖಂದರ್ ಸಿನಿಮಾ ರಿಲೀಸ್ ಆಗಲಿದೆ. ಮುಂದಿನ ವರ್ಷ ದಿ ಗರ್ಲ್‌ಫ್ರೆಂಡ್, ಕುಬೇರ, ರೈನ್‌ಬೋ ಚಿತ್ರಗಳು ರಿಲೀಸ್‌ಗೆ ರೆಡಿಯಾಗಿದೆ.

rashmika mandanna

ಇನ್ನೂ ರಶ್ಮಿಕಾ ಅವರು ಸ್ಟಾರ್ ನಟರ ಜೊತೆಗಿನ ಸಿನಿಮಾಗಳನ್ನು ಆಯ್ಕೆ ಮಾಡೋದಕ್ಕಿಂತ ಅವರ ಪಾತ್ರ ಮತ್ತು ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಇದನ್ನೂ ಓದಿ:ದೀಪಿಕಾ ಪಡುಕೋಣೆ ಬಳಿಕ ಆಲಿಯಾ ಭಟ್‌ಗೆ ನಾಗ್ ಅಶ್ವಿನ್ ಆ್ಯಕ್ಷನ್ ಕಟ್?

Share This Article