ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಕಾರ್ಯಕ್ರಮದಲ್ಲಿ ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿ ಈ ವಾರ ದೊಡ್ಮನೆಯ ಆಟದಲ್ಲಿ ‘ಬಿಗ್ ಬಾಸ್’ ಟ್ವಿಸ್ಟ್ ಕೊಟ್ಟಿದ್ದಾರೆ. ಡಬಲ್ ನಾಮಿನೇಷನ್ ನಡೆಯುವ ಸಾಧ್ಯತೆಯಿದೆ. ಈ ವಾರ 10 ಮಂದಿ ನಾಮಿನೇಟ್ ಆಗಿದ್ದಾರೆ. ಇದನ್ನೂ ಓದಿ:BBK 11: ಹನುಮಂತನ ಬಟ್ಟೆ ಧರಿಸಿ ಕ್ವಾಟ್ಲೆ ಕೊಟ್ಟ ಗೌತಮಿ
ಹೌದು..ಬಿಗ್ ಬಾಸ್ ಮನೆಯ ಆಟಕ್ಕೆ ಅಂತ್ಯ ಹಾಡಲು 10 ಸ್ಪರ್ಧಿಗಳ ಮೇಲೆ ನಾಮಿನೇಷನ್ ಕತ್ತಿ ತೂಗುತ್ತಿದೆ. ಈ ಪೈಕಿ ಅನುಷಾ ರೈ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಭವ್ಯಾ ಗೌಡ, ಧರ್ಮ ಕೀರ್ತಿರಾಜ್, ಗೋಲ್ಡ್ ಸುರೇಶ್, ಗೌತಮಿ ಜಾದವ್, ಹನುಮಂತ, ಶಿಶಿರ್ ಶಾಸ್ತಿç, ಉಗ್ರಂ ಮಂಜು ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಯಾರ ಆಟ ಮನೆಯಲ್ಲಿ ಅಂತ್ಯವಾಗಲಿದೆ ಎಂದು ಕಾದುನೋಡಬೇಕಿದೆ.
ಕಳೆದ ವಾರ ಭವ್ಯಾ ಎಲಿಮಿನೇಟ್ ಎಂದು ಬಿಗ್ ಬಾಸ್ ಪ್ರ್ಯಾಂಕ್ ಮಾಡಿದರು. ಕಳೆದ ವೀಕೆಂಡ್‌ನಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿ ಈ ವಾರ ಜೋಡಿ ಎಲಿಮಿನೇಷನ್ ನಡೆಯಬಹುದು ಎಂಬುದು ಪ್ರೇಕ್ಷಕರ ಲೆಕ್ಕಾಚಾರ.
ಇನ್ನೂ ಈಗಾಗಲೇ ಯಮುನಾ, ರಂಜಿತ್, ಹಂಸ, ಮಾನಸಾ ಅವರ ಆಟ ದೊಡ್ಮನೆಯಲ್ಲಿ ಅಂತ್ಯವಾಗಿದೆ. ಹಾಗಾದ್ರೆ ಈ ವಾರಾಂತ್ಯ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದರ ಬಗ್ಗೆ ಪ್ರೇಕ್ಷಕರು ಕೌತುಕದಿಂದ ಎದುರು ನೋಡುತ್ತಿದ್ದಾರೆ.