BBK 11: ಹನುಮಂತನ ಬಟ್ಟೆ ಧರಿಸಿ ಕ್ವಾಟ್ಲೆ ಕೊಟ್ಟ ಗೌತಮಿ

Public TV
1 Min Read
hanumantha

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada 11) 7ನೇ ವಾರಕ್ಕೆ ಕಾಲಿಟ್ಟಿದೆ. ಈಗ ದೊಡ್ಮನೆಯಲ್ಲಿ ಸ್ಪರ್ಧಿಗಳನ್ನು ಜೋಡಿಗಳಾಗಿ ಪರಿವರ್ತನೆ ಮಾಡಿದ್ದಾರೆ. ಆದರೆ ಮನೆಯ ಯಾವ ಮೂಲೆಗೂ ಹೋದರು ಸ್ಪರ್ಧಿಗಳು ಪರಸ್ಪರ ಅಂಟಿಕೊಂಡು ಓಡಾಡಬೇಕು. ಮಿಸ್ ಆಗಿ ಜೋಡಿಗಳನ್ನು ಬಿಟ್ಟು ಹಾಗೇ ಹೋಗಿದ್ದೇ ಆದರೆ ‘ಬಿಗ್ ಬಾಸ್’ ಕಡೆಯಿಂದ ಬಿಗ್ ಶಿಕ್ಷೆ ಸಿಗೋದು ಗ್ಯಾರಂಟಿ. ಇದನ್ನೂ ಓದಿ:‘ಕುಬೇರ’ ಸಿನಿಮಾದಲ್ಲಿ ನಾಗಾರ್ಜುನ ಅಕ್ಕಿನೇನಿ ಹೊಸ ಪೋಸ್ಟರ್‌ ಔಟ್‌

hanumantha 1ಇನ್ನೂ ಮನೆಯಲ್ಲಿರೋ ಸ್ಪರ್ಧಿಗಳಿಗೆ ಬಿಗ್ ಬಾಸ್, ತಾವೇ ಜೋಡಿಗಳನ್ನು ಆಯ್ಕೆ ಮಾಡಿದ್ದಾರೆ. ಹಳ್ಳಿ ಹೈದ ಹನುಮಂತಗೆ ಗೌತಮಿ, ಉಗ್ರಂ ಮಂಜು ಜೊತೆ ಭವ್ಯಾ ಗೌಡ, ಶಿಶಿರ್ ಮತ್ತು ಚೈತ್ರಾ ಕುಂದಾಪುರ, ಧರ್ಮ- ಐಶ್ವರ್ಯಾ ಸಿಂಧೋಗಿ, ಅನುಷಾ ರೈ- ಗೋಲ್ಡ್ ಸುರೇಶ್ ಹಾಗೂ ಧನರಾಜ್- ಮೋಕ್ಷಿತಾ ಪೈ ಅವರನ್ನು ಜೋಡಿಗಳನ್ನಾಗಿ ಮಾಡಿ ಈ ವಾರದ ಟಾಸ್ಕ್ ನೀಡುತ್ತಿದ್ದಾರೆ.

hanumantha 2

ಒಂದೊಂದು ಜೋಡಿಯು ಇನ್ಮುಂದೆ ಯಾವ ರೀತಿ ಮನರಂಜನೆ ನೀಡುತ್ತಾರೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಗೌತಮಿ ಜಾಧವ್ (Gouthami Jadav) ಅವರು ಹನುಮಂತನಾಗಿ (Hanumantha) ಚೇಂಚ್ ಆಗಿದ್ದಾರೆ. ಹನುಮಂತನಂತೆಯೇ ನಟಿ ಗೆಟಪ್ ಬದಲಿಸಿದ್ದಾರೆ. ಹನುಮಂತ ಧರಿಸುವ ಹಾಗೇ ವೇಷ ಭೂಷಣ ತೊಟ್ಟು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾತಾಡಿದ್ದಾರೆ. ಬಳಿಕ ಮನೆಮಂದಿಗೆ ಗೌತಮಿ ಕ್ವಾಟ್ಲೆ ಕೊಟ್ಟಿದ್ದಾರೆ. ಗೌತಮಿ ನಯಾ ಲುಕ್ ನೋಡಿ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.

HANUMANTHA

ಇನ್ನೂ ಕಳೆದ ವಾರ ಎಲಿಮಿನೇಷನ್ ಪ್ರತಿಕ್ರಿಯೆ ನಡೆದಿಲ್ಲ. ಭವ್ಯಾರನ್ನು ಪ್ರ್ಯಾಂಕ್ ಎಲಿಮಿನೇಷನ್ ಮಾಡಿ `ಬಿಗ್ ಬಾಸ್’ ಉಲ್ಟಾ ಹೊಡೆದಿದ್ದರು. ಈ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ.

Share This Article