ಅಬಕಾರಿಯಲ್ಲಿ 700 ಕೋಟಿ ಹಣ ಪಡೆಯೋಕಾಗುತ್ತಾ? ಸುಳ್ಳು ಹೇಳೋದು ಪ್ರಧಾನಿಗೆ ಅಗೌರವ – ಸಿಎಂ

Public TV
3 Min Read
Siddaramaiah 4

ಹುಬ್ಬಳ್ಳಿ: ಅಬಕಾರಿಯಲ್ಲಿ 700 ಕೋಟಿ ಪಡೆಯೋಕೆ ಆಗುತ್ತಾ? ಒಬ್ಬ ಪ್ರಧಾನಿ ಆದವರು ಈ ರೀತಿ ಸುಳ್ಳು ಹೇಳೊದು ಆ ಸ್ಥಾನಕ್ಕೆ ಅಗೌರವ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಮದ್ಯದಂಗಡಿ ಮಾಲೀಕರಿಂದ 700 ಕೋಟಿ ರೂ. ಪಡೆದಿದೆ ಎಂಬ ಆರೋಪ ಇದೆ ಅನ್ನೋ ಪ್ರಧಾನಿ ಮೋದಿ (Narenda Modi) ಅವರ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಬೆಂಗ್ಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ಮೇಲೆ ತೆಲಂಗಾಣದಲ್ಲಿ ಪುಂಡರಿಂದ ಕಲ್ಲು ತೂರಾಟ

PM Modi

ಒಬ್ಬ ಪ್ರಧಾನಿ ಆದವರು ಸುಳ್ಳು ಹೇಳೊದು ಆ ಸ್ಥಾನಕ್ಕೆ ಅಗೌರವ. ಯಾರಾದ್ರೂ ಅಬಕಾರಿಯಲ್ಲಿ 700 ಕೋಟಿ ಅಕ್ರಮ ಮಾಡಲು ಆಗುತ್ತಾ? ಒಬ್ಬ ಪ್ರಧಾನಿ ಸುಳ್ಳು ಹೇಳಬೇಕಾದ್ರೆ ಏನು ಹೇಳಬೇಕು? ಯಾಕ್ರಿ ದುಡ್ಡು ಕೊಡ್ತಾರೆ ಅವರು, ಬಿಜೆಪಿಯವರು ರಾಜಕೀಯಗೋಸ್ಕರ ಆರೋಪ ಮಾಡಿದ್ದಾರೆ, ಮದ್ಯದ ಅಂಗಡಿ ವ್ಯಾಪಾರಿಗಳು ರಾಜಕೀಯ ಕಾರಣಕ್ಕೆ ಆರೋಪ ಮಾಡಿರುತ್ತಾರೆ ಎಂದರು.

ಹಿಂದೆ ಶಾಸಕರನ್ನ ಕೊಂಡುಕೊಂಡಿದ್ರಲ್ಲಾ, ಎಷ್ಟು ಕೋಟಿ ಕೊಟ್ಟಿದ್ರು? ಎಲ್ಲಿಂದ ದುಡ್ಡು ಬಂತು ಯತ್ನಾಳ್‌ ಅವರು, ಸಿಎಂ ಆಗಬೇಕಾದರೆ 2 ಸಾವಿರ ಕೋಟಿಕೊಡಬೇಕು ಅಂದಿದ್ದರು. ಯಾವ ದುಡ್ಡು ಅದು? ಎಂದ ಸಿದ್ದರಾಮಯ್ಯ, ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಹಣ ಕೊಟ್ಟ ಬಗ್ಗೆ ಮಾತಾಡಿದ್ದು, ಇದು ನಾನು ಹೇಳಿದ್ದಲ್ಲಾ ಯತ್ನಾಳ ಹೇಳಿದ್ದು. ಅವರು ಕೇಂದ್ರದ ಮಾಜಿ ಮಂತ್ರಿ, ಯಡಿಯೂರಪ್ಪ 2,000 ಕೋಟಿ ರೂ. ಕೊಟ್ಟು ಸಿಎಂ ಆಗಿದ್ದು ಎಂದಿದ್ದಾರೆ. ಬೊಮ್ಮಾಯಿ ಸಿಎಂ ಆಗಲು ಹಣ ಕೊಟ್ಟರು ಎಂದಿದ್ದರು. ಎಲ್ಲಿಂದ ಬಂತು ದುಡ್ಡು? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಇದೇ ವೇಳೆ ಕೋವಿಡ್‌ ಹಗರಣ ತನಿಖೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಗರಣ ವರದಿ ಇನ್ನೂ ಕ್ಯಾಬಿನೆಟ್‌ ಎದುರು ಬಂದಿಲ್ಲ, ಎಗ್ಸಾಮಿನ್ ಮಾಡುತಿದ್ದಾರೆ, ಸಬ್ ಕಮಿಟಿ ವರದಿ ಬಂದ ಮೇಲೆ, ಅದರ ಬಗ್ಗೆ ಚರ್ಚೆ ಆಗಲಿದೆ ಎಂದರು. ಇದನ್ನೂ ಓದಿ: ಯುವತಿಯ ಖಾಸಗಿ ಕ್ಷಣ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಪ್ರಿಯಕರ, ಅಪ್ರಾಪ್ತ ಸೇರಿದಂತೆ 6 ಮಂದಿಯಿಂದ ಗ್ಯಾಂಗ್‌ ರೇಪ್‌

ಮುಂದುವರಿದು ಗೊಡ್ಡು ಬೆದರಿಕೆಗೆ ಅಂಜಲ್ಲ ಎಂಬ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿ, ಗೊಡ್ಡು ಬೆದರಿಕೆ ಅಲ್ಲಾ ಇದು, ನಾವು ಗುನ್ನಾ ಅವರ ಅಧ್ಯಕ್ಷತೆಯಲ್ಲಿ ಕಮಿಷನ್ ಮಾಡಿದ್ದು, ಅವರು ಕೊಟ್ಟ ವರದಿ ಅದು, ಅದರ ಆಧಾರದ ಮೇಲೆ ಇದು ನಡೆದಿದೆ. ಲೂಟಿ ಹೊಡೆದು ಗೊಡ್ಡು ಎಂದರೆ ಹೇಗೆ? ಕ್ರಿಮಿನಲ್ ಆಕ್ಷನ್ ಆದ ಮೇಲೆ ಏನು ಮಾಡ್ತಾರೆ ನೋಡೊಣ? ಇನ್ನೂ ಸಬ್ ಕಮಟಿ ರಿಪೋರ್ಟ್ ಬಂದಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನ್ಯಾಯಾಂಗದ ಮೇಲೆ ಭರವಸೆ ಯಡಿಯೂರಪ್ಪ ಅವರಿಗೆ ಮಾತ್ರ ಭರವಸೆ ಇದೆಯಾ? ಉಳಿದವರಿಗೆ ಇಲ್ಲವಾ? ನ್ಯಾಯಾಂಗ ಇರುವುದು ನ್ಯಾಯ ಕೊಡಲಿಕ್ಕೆ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಅದು ಇರೋದು. ಅವರು ಮಾಡಿರುವುದು ತಪ್ಪು ಎಂದು ಸಾಬಿತಾದರೆ ಯಡಿಯೂರಪ್ಪ ಎನ್ ಮಾಡ್ತಾರೆ? ಎಂದ ಅವರು ಯಡಿಯೂರಪ್ಪ ಅವರಿಗೆ ಕೊಲೆ ಬೆದರಿಕೆ ಬಂದಿತ್ತು ಎಂಬ ವಿಚಾರವಾಗಿ ಮಾತನಾಡಿ, ಕೊಲೆ ಬೆದರಿಕೆ ಹಾಕಿದವರ ಮೇಲೆ ದೂರು ಕೊಡಬೇಕಲ್ಲಾ? ಯಾಕೆ ಕೇಸ್‌ ಹಾಕಿಲ್ಲಾ? ಈಗ ಅದನ್ನ ಹೇಳಿದರೆ ಹೇಗೆ? ಎಂದು ಪ್ರಶ್ನೆ ಮಾಡಿದರು.

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮುಡಾ ದಾಖಲೆ ಬಿಡುಗಡೆ ಮಾಡಿದ ವಿಚಾರವಾಗಿ ಮಾತನಾಡಿ, ಹಣ ಚೆಕ್ ಮೂಲಕ ಕೊಟ್ಟಿದಾರೇನ್ರಿ? ಸುಳ್ಳು ಆರೋಪ ಮಾಡಿದರೆ ಏನು, ನನ್ನ ಬಾಮೈದ ಪತ್ನಿಗೆ ಕೊಟ್ಟಿದ್ದಾರೆ, ತಹಶಿಲ್ದಾರ್‌ ಯಾಕೆ ಕೊಡ್ತಾರೆ? ಅಪರ ಆಯುಕ್ತ ಯಾಕೆ ಕೊಡ್ತಾರೆ? ಉಪ ನೊಂದಣಾಧಿಕಾರಿ ಯಾಕೆ ಕೊಡ್ತಾರೆ? ಸುಮ್ನೆ ಸುಳ್ಳು ಆರೋಪ ಮಾಡ್ತಾರೆ ಎಂದು ಜಾರಿಕೊಂಡರು. ಇದನ್ನೂ ಓದಿ: 25 ಲಕ್ಷ ಉದ್ಯೋಗಾವಕಾಶ, 1 ಟ್ರಿಲಿಯನ್ ಡಾಲರ್‌ ಆರ್ಥಿಕ ಗುರಿ, ಉದ್ಯಮಿಗಳಿಗೆ ಬೆಂಬಲ – ಮಹಾರಾಷ್ಟ್ರಕ್ಕೆ ಬಿಜೆಪಿ 25 ಗ್ಯಾರಂಟಿ

Share This Article