ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ: ಬೊಮ್ಮಾಯಿ

Public TV
3 Min Read
basavaraj bommai 1

– ವಕ್ಫ್ ನೋಟಿಸ್ ವಾಪಸ್ ಪಡೆದಿರೋದು ಕಣ್ಣು ಒರೆಸೋ ತಂತ್ರ

ಹುಬ್ಬಳ್ಳಿ: ಈ ಉಪಚುನಾವಣೆ ಬಿಜೆಪಿ (BJP) ಬಸವರಾಜ ಬೊಮ್ಮಾಯಿ (Basavaraj Bommai) ವರ್ಸಸ್ ಕಾಂಗ್ರೆಸ್ ಸರ್ಕಾರ. ಇದು ಕಾಂಗ್ರೆಸ್‌ನ ಸರ್ವಾಧಿಕಾರ, ದಬ್ಬಾಳಿಕೆಯ ಸರ್ಕಾರ ನಡೀತಾ ಇದೆ. ವಕ್ಫ್ ನೋಟಿಸ್ ವಾಪಸ್ ಪಡೆದಿರೋದು ಕಣ್ಣು ಒರೆಸೋ ತಂತ್ರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಣದ ಹೊಳೆ ಹರಿಸೋಕೆ ಆರಂಭ ಮಾಡಿದ್ದಾರೆ. ಹಣ ಹಂಚುವುದರಲ್ಲಿ ಅವರಲ್ಲೇ ಪೈಪೋಟಿ ನಡೆದಿದೆ. ಸಮುದಾಯವಾರು ಶಾಸಕರು, ಸಚಿವರು ಹಣ ಹಂಚುತ್ತ ಇದ್ದಾರೆ. ಇಂತಹ ಹಣದ ಹೊಳೆ ಎಲ್ಲೂ ನೋಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: Haveri| ನೀರಿನ ತೊಟ್ಟಿಯಲ್ಲಿ ಮುಳುಗಿ ಬಾಲಕ ಸಾವು

ವಕ್ಫ್ ಹಿನ್ನೆಲೆ ಹಾವೇರಿ (Haveri) ರೈತನ ಸಾವಿನ ವಿಚಾರವಾಗಿ ಮಾತನಾಡಿ, ಇದು ಸತ್ಯವಾದದ್ದು, ಕೋರ್ಟ್ಗೆ ಹೋಗುವುದಕ್ಕಾಗಲ್ಲ. ಅದಾಲತ್‌ಗೆ ಹೋಗಬೇಕು ಅಲ್ಲಿ ಸಿಗಲ್ಲ. ಅಧಿಕಾರಿಗಳು ಮಾತು ಕೇಳಲ್ಲ. ಇಂತಹ ಪರಿಸ್ಥಿತಿ ಸಿಲುಕಿದ ರೈತರು ಏನು ಮಾಡುತ್ತಾರೆ? ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ ಮೇಲೆ ಅವರ ಮೇಲೆ ಕೇಸ್ ಹಾಕುತ್ತಾರೆ. ಇದು ಸರ್ವಾಧಿಕಾರ, ದಬ್ಬಾಳಿಕೆಯ ಸರ್ಕಾರ ನಡೀತಾ ಇದೆ. ಹಿಂದೆ ಎಮರ್ಜೆನ್ಸಿಯಲ್ಲಿ ಇದೆಲ್ಲ ಆಗಿದೆ. ಆಮೇಲೆ ಪರಿಸ್ಥಿತಿ ಹೇಗಾಗಿದೆ ಅನ್ನೋದು ಗೊತ್ತಿದೆ. ಅದೇ ಈ ಸರ್ಕಾರಕ್ಕೂ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ನುಗ್ಗಿ ಚಿನ್ನಾಭರಣ ಕಳ್ಳತನ – ಖತರ್ನಾಕ್ ಕಳ್ಳರ ಬಂಧನ

ಯತ್ನಾಳ್ ಮೇಲೆ ಪ್ರಾಸಿಕ್ಯೂಷನ್ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷ ಧಮನ ಮಾಡಬೇಕು. ಅವರ ನೈತಿಕತೆ ಕುಗ್ಗಿಸುವ ಪ್ರಯತ್ನ ಸಾಧ್ಯವಾಗಲ್ಲ. ಎಷ್ಟು ಒತ್ತಡ ಹಾಕಿದರೂ ಪುಟಿದು ಏಳುತ್ತೇವೆ. ಕೋವಿಡ್ ವೇಳೆ ಪಿಪಿಇ ಕಿಟ್ ಉತ್ಪಾದನೆ ಇರಲಿಲ್ಲ. ವೈದ್ಯರು, ನರ್ಸ್ಗಳಿಗೆ ಪಿಪಿಇ ಕಿಟ್ ಇಲ್ಲದೇ ಕೆಲಸ ಮಾಡೋಕೆ ಆಗಲ್ಲ. ಹೀಗಾಗಿ ಪಿಪಿಇ ಕಿಟ್ ತಂದಿರೋದು ನಿಜ. ಈ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಆಗಿದೆ. ಕಾರಣಗಳನ್ನು ಆಗಲೇ ಆರೋಗ್ಯ ಸಚಿವರು ಕೊಟ್ಟಿದ್ದಾರೆ. ನ್ಯಾಷನಲ್ ಡಿಸಾಸ್ಟರ್ ಮಾಡಿದ್ರು, ಎನ್‌ಡಿಆರ್‌ಎಫ್ ಇಂದ ಹಣ ತಗೊಂಡಿದ್ದೆವು. ಎಲ್ಲಾ ಮುಗಿದ ಮೇಲೆ ಅದನ್ನ ವಿಶ್ಲೇಷಣೆ ಮಾಡೋದು ಬೇರೆ. ಜನರ ಪ್ರಾಣ ಉಳಿಸಲು ಕೆಲವು ನಿರ್ಣಯ ತಗೊಂಡಿದ್ದೇವೆ. ಅದೇ ಒಂದು ಅಪರಾಧ ಅಂತಾ ಬಿಂಬಿಸೋದು ಎಷ್ಟು ಸರಿ? ಇವೆಲ್ಲ ಕಾನೂನಿನ ಪ್ರಕಾರ ಆಗಿದೆ ಎಂದರು. ಇದನ್ನೂ ಓದಿ: ಮುಡಾದಲ್ಲಿ ಸಿಎಂ ಪ್ರಭಾವಕ್ಕೆ ಮತ್ತೊಂದು ಸಾಕ್ಷಿ – ಸಿಎಂ ಪತ್ನಿ ಕ್ರಯಪತ್ರದ ಮುದ್ರಾಂಕ ಶುಲ್ಕ ತಹಶೀಲ್ದಾರ್‌ರಿಂದಲೇ ಪಾವತಿ

ಚುನಾವಣೆ ವೇಳೆ ಕಾಂಗ್ರೆಸ್ (Congress) ಮೇಲೆ ಬಂದಂತಹ ಆರೋಪದ ವಿಚಾರವಾಗಿ ಮಾತನಾಡಿ, ಒಬ್ಬೊಬ್ಬ ಸಚಿವರ ಮೇಲೆ ಆರೋಪ ಬರ್ತಾ ಇದೆ. ಬೇರೆಡೆ ಸೆಳೆಯೋದಕ್ಕೆ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡ್ತಾ ಇದ್ದಾರೆ. ನರೇಂದ್ರ ಮೋದಿಯವರು ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಉತ್ತರ ಕೊಡೋಕೆ ಆಗದೆ ವರದಿ ಕ್ಯಾಬಿನೆಟ್‌ನಲ್ಲಿ ಒಪ್ಪಿಕೊಳ್ಳದೆ ಲೀಕ್ ಮಾಡಿದ್ದಾರೆ. ಇಷ್ಟು ದಿನ ಬಿಟ್ಟು ಈಗ್ಯಾಕೆ ಲೀಕ್ ಮಾಡಿದ್ದಾರೆ? ವಕ್ಫ್ ನೋಟಿಸ್ ವಾಪಸ್ ಪಡೆದಿರೋದು ಕಣ್ಣು ಒರೆಸೋ ತಂತ್ರ. ಆದೇಶದಲ್ಲಿ ಎಲ್ಲೂ ಕೂಡ ಗೆಜೆಟ್ ನೋಟಿಫಿಕೇಟಿನ್ ರದ್ದಾಗಿಲ್ಲ. ಎಲ್ಲಿಯವರೆಗೂ ಗೆಜೆಟ್ ನೋಟಿಫಿಕೇಟಿನ್ ರದ್ದಾಗೋದಿಲ್ಲ ಅಲ್ಲಿಯವರೆಗೂ ತೂಗು ಕತ್ತಿ ಇರೋದೇ. ನೋಟಿಸ್ ವಾಪಸ್ ಪಡೆದಿದ್ದು, ಮತ್ತೆ ಕೊಡೋಕೆ ಎಷ್ಟೊತ್ತು ಬೇಕು? ಗೆಜೆಟ್ ವಾಪಸ್ ಆಗದೆ ಹೋದ್ರೆ ರೈತರಿಗೆ ಮೋಸ ಮಾಡಿದಂತೆ ಎಂದು ಹೇಳಿದರು. ಇದನ್ನೂ ಓದಿ: ಜಮೀರ್‌ನನ್ನು ಗಡಿಪಾರು ಮಾಡೋದು ಬೇಡ ಆಲದ ಮರಕ್ಕೆ ನೇಣು ಹಾಕಿ: ಮುತಾಲಿಕ್ ಕಿಡಿ

Share This Article