Tumakuru| 214 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ: ಪರಮೇಶ್ವರ್

Public TV
1 Min Read
G Parameshwar Tumakuru

ತುಮಕೂರು: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 2014-25ನೇ ಸಾಲಿನಲ್ಲಿ 214 ಕೋಟಿ ರೂ. ವೆಚ್ಚದ 3,811 ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ (G Parameshwar) ತಿಳಿಸಿದರು.

ಕೊರಟಗೆರೆ (Koratagere) ಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುತೇಕ ಈ ಕಾಮಗಾರಿಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಿಎಸ್‌ಆರ್ 27 ಕೋಟಿ ರೂ. ಅನುದಾನದಲ್ಲಿ ಕೊಠಡಿಗಳ ದುರಸ್ತಿ, ನೂತನ ಕಟ್ಟಡ ನಿರ್ಮಾಣದ ಜೊತೆಗೆ ಆಟದ ಮೈದಾನ, ಶೌಚಾಲಯ ನಿರ್ಮಾಣ ಆರೋಗ್ಯ ಕ್ಷೇತ್ರಗಳಿಗೆ ಬಳಸಲಾಗಿದೆ ಎಂದರು. ಇದನ್ನೂ ಓದಿ: Chikkaballapur| ಸಚಿವ ಡಾ.ಎಂಸಿ ಸುಧಾಕರ್ ನಿವಾಸದ ಬಳಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು

ತಾಲೂಕಿನಲ್ಲಿ ನೂತನವಾಗಿ 48 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಅವುಗಳಲ್ಲಿ ಲಂಬಾಣಿ ತಾಂಡ, ಗೊಲ್ಲರಹಟ್ಟಿಗಳು ಒಳಗೊಂಡಿವೆ. ಈಗಾಗಲೇ 800 ಹಕ್ಕು ಪತ್ರಗಳನ್ನು ತಯಾರಿ ಮಾಡಿಕೊಂಡಿದ್ದು, ಸದ್ಯದಲ್ಲೇ ವಿತರಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!

ನರೇಗಾ ಯೋಜನೆಯಡಿ ತಾಲೂಕಿಗೆ 4,422 ಕಾಮಗಾರಿಗಳಿಗೆ 39 ಕೋಟಿ ರೂ. ಮುಂಜೂರು ಮಾಡಲಾಗಿದೆ. 20 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 1,618 ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿವೆ. 618 ಕಾಮಗಾರಿ ಪೂರ್ಣಗೊಂಡಿವೆ ಎಂದು ಹೇಳಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್‌; ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ತಾಲೂಕಿನ ಹುಲಿಕುಂಟೆ ಬಳಿ ತೋಟಗಾರಿಕೆ ಇಲಾಖೆಯ ಜೇನುಕೃಷಿ ಕಟ್ಟಡ ಪಾಳು ಬಿದ್ದಿದ್ದು, ಅದನ್ನು ಶೀಘ್ರವೇ ಅಭಿವೃದ್ಧಿಪಡಿಸಿ ಕಟ್ಟಡ ಸದುಪಯೋಗ ಪಡಿಸಿಕೊಳ್ಳುವಂತೆ ಇಲಾಖೆ ಅಧಿಕಾರಿಗೆ ಸೂಚಿಸಿದರು. ಹೊಳವನಹಳ್ಳಿ ಜನತಾ ಕಾಲೊನಿ ಬಳಿ ಪಾಳು ಬಿಟ್ಟಿರುವ ವಿದ್ಯಾರ್ಥಿ ನಿಲಯ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದು ವಿದ್ಯಾರ್ಥಿ ನಿಲಯಕ್ಕೆ ಬಳಸಿಕೊಳ್ಳಲು ತಿಳಿಸಿದರು. ಇದನ್ನೂ ಓದಿ: ನೀಟ್‌ ಆಕಾಂಕ್ಷಿಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ತಿಂಗಳಾನುಗಟ್ಟಲೆ ರೇಪ್‌, ಬ್ಲ್ಯಾಕ್‌ಮೇಲ್‌ – ಕಾಮುಕರು ಅರೆಸ್ಟ್‌

Share This Article