ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ – ಬಿಷ್ಣೋಯ್‌ ಗ್ಯಾಂಗ್‌ನಿಂದ 5 ಕೋಟಿಗೆ ಬೇಡಿಕೆ

Public TV
1 Min Read
salman khan 3 1

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನಿಂದ ಮುಂಬೈ ಪೊಲೀಸರಿಗೆ ಕೊಲೆ ಬೆದರಿಕೆಯ ಸಂದೇಶ ಬಂದಿದೆ.

ಗುರುವಾರ ರಾತ್ರಿ ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

salman khan 1

ಸಂದೇಶ ಕಳುಹಿಸಿದವರು ನಟನಿಗೆ ಬೆದರಿಕೆ ಹಾಕಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ಬಿಷ್ಣೋಯ್ ಗ್ಯಾಂಗ್ ಪರವಾಗಿ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ವ್ಯಕ್ತಿಯು ‘ಮೈ ಸಿಕಂದರ್ ಹೂನ್’ ಹಾಡಿನ ಗೀತರಚನೆಕಾರನಿಗೂ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂಚಾರ ಅಧಿಕಾರಿಗಳ ದೂರಿನ ಮೇರೆಗೆ ವರ್ಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಳೆದ ಕೆಲವು ವಾರಗಳಲ್ಲಿ, ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಸಲ್ಮಾನ್ ಖಾನ್‌ಗೆ ಹಲವು ಬೆದರಿಕೆ ಸಂದೇಶಗಳು ಬಂದಿವೆ. ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಖಾನ್‌ಗೆ ಜೀವ ಬೆದರಿಕೆ ಇತ್ತು.

ಕೊಲೆ ಯತ್ನ ಮತ್ತು ಸುಲಿಗೆ ಸೇರಿದಂತೆ ಪ್ರಕರಣಗಳಲ್ಲಿ ಬಿಷ್ಣೋಯ್ ಸ್ವತಃ ಅಹಮದಾಬಾದ್‌ನ ಸಾಬರಮತಿ ಜೈಲಿನಲ್ಲಿದ್ದರೆ, ಆತನ ತಂಡದ ಶಂಕಿತ ಸದಸ್ಯರು ಏಪ್ರಿಲ್‌ನಲ್ಲಿ ನಟನ ಬಾಂದ್ರಾ ಮನೆಯ ಹೊರಗೆ ಗುಂಡು ಹಾರಿಸಿದ್ದು.

Share This Article