ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಹೊಸ ರೀಲ್ಸ್ ಹಂಚಿಕೊಂಡ ನಿವೇದಿತಾ ಗೌಡ

Public TV
1 Min Read
niveditha gowda 1

ರ‍್ಯಾಪರ್ ಚಂದನ್ ಶೆಟ್ಟಿ (Chandan Shetty) ಜೊತೆ ಡಿವೋರ್ಸ್ ಆದ್ಮೇಲೆ ನಿವೇದಿತಾ ಗೌಡ (Niveditha Gowda) ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಟ್ರೋಲಿಗರ ಕಾಟದ ನಡುವೆಯೂ ಹೊಸ ರೀಲ್ಸ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಜೈ ಹನುಮಾನ್’ ಸಿನಿಮಾದಲ್ಲಿ ರಾಮನಾಗಿ ರಾಣಾ ದಗ್ಗುಬಾಟಿ?

niveditha gowda

ಕೆಂಪು ಬಣ್ಣದ ಗೌನ್ ಧರಿಸಿ ಸಖತ್ ಹಾಟ್ ಆಗಿ ನಟಿ ಪೋಸ್ ಕೊಟ್ಟಿದ್ದಾರೆ. ಸಖತ್‌ ಸ್ಟೈಲೀಶ್‌ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಹೊಸ ರೀಲ್ಸ್‌ನಲ್ಲಿ ನಟಿಯ ಅವತಾರ ಕಂಡು ಸಖತ್ ಹಾಟ್ ಮಗಾ ಎಂದು ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.

ನಿಮಗೆ ಡಿವೋರ್ಸ್ ಆಗಿದೆ ಅನ್ನೋದು ನೆನಪಿದ್ಯಾ? ಎಂದೆಲ್ಲಾ ನಟಿಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಯಾವ ಕಾಮೆಂಟ್‌ಗಳಿಗೂ ತಲೆಕೆಡಿಸಿಕೊಳ್ಳದೇ ನಟಿ ಸೈಲೆಂಟ್ ಆಗಿದ್ದಾರೆ. ಇದನ್ನೂ ಓದಿ:ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ಅನಂತಕೃಷ್ಣ ಮದುವೆ ಡೇಟ್ ಫಿಕ್ಸ್

niveditha

ಇನ್ನೂ ಚಂದನ್ ಶೆಟ್ಟಿ ಜೊತೆ ‘ಮುದ್ದು ರಾಕ್ಷಸಿ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ರಿಲೀಸ್‌ಗೆ ನಟಿ ಎದುರು ನೋಡ್ತಿದ್ದಾರೆ. ಸೃಜನ್ ಲೋಕೇಶ್ ನಟನೆಯ ‘ಜಿಎಸ್‌ಟಿ’ ಸಿನಿಮಾದಲ್ಲಿ ನಿವೇದಿತಾ ನಟಿಸಿದ್ದಾರೆ.

niveditha 1

ಅಂದಹಾಗೆ, ಚಂದನ್‌ ಶೆಟ್ಟಿ ಜೊತೆ ನಿವೇದಿತಾ 2020ರಲ್ಲಿ ಮೈಸೂರಿನಲ್ಲಿ ಮದುವೆಯಾದರು. 2024ರ ಜೂನ್‌ನಲ್ಲಿ ಈ ಜೋಡಿ ಡಿವೋರ್ಸ್‌ ಘೋಷಿಸಿದರು.

Share This Article